ಭಾವನಾತ್ಮಕವಾಗಿ ಕೆಣಕುವುದನ್ನು ಬಿಡುವಂತೆ ಬಿಜೆಪಿಗೆ ಶೆಟ್ಟರ್ ಸಲಹೆ

shettar new
Published on

ಹುಬ್ಬಳ್ಳಿ : ಚುನಾವಣೆ ಸಮೀಪಿಸುತ್ತಿದ್ದಂತೆಯೇ ಧರ್ಮದ ವಿಚಾರ ಕೆದಕುವ ಕೆಲಸ ಬಿಜೆಪಿ ಮಾಡುತ್ತಿದೆ. ಕೇಂದ್ರದಲ್ಲಿ ಹತ್ತು ವರ್ಷ ಆಡಳಿತ ನಡೆಸಿರುವ ಬಿಜೆಪಿ, ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಕೇಳಲಿ. ಅದನ್ನು ಬಿಟ್ಟು ಮತದಾರರನ್ನು ಭಾವನಾತ್ಮಕವಾಗಿ ಕೆಣಕುವುದನ್ನು ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಈಗಾಗಲೇ ಪ್ರತಿಕ್ರೀಯೆ ನೀಡಿದ್ದಾರೆ ಎಂದರು.

ಕೇಂದ್ರ ಸರ್ಕಾರ ಬಡ ಜನರ ಬಗ್ಗೆ ವಿಚಾರ ಮಾಡಬೇಕು. ಅದನ್ನು ಬಿಟ್ಟು ಬೆಳಗ್ಗೆಯಿಂದ ಸಂಜೆಯವರೆಗೆ ಧಾರ್ವಿುಕ ವಿಚಾರ ಕೆದಕುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.

ಒಂದು ದೇಶ, ಒಂದು ಚುನಾವಣೆ ಅನುಷ್ಠಾನಗೊಂಡರೆ ಒಳ್ಳೆಯದು. ಆದರೆ, ಅದು ಅಸಾಧ್ಯ. ಒಂದು ವೇಳೆ ಅನುಷ್ಠಾನಗೊಳಿಸಲು ಹೋದರೆ ಈಗಾಗಲೇ ವಿವಿಧ ರಾಜ್ಯಗಳಲ್ಲಿ ಇರುವ ಸರ್ಕಾರಗಳನ್ನು ವಿಸರ್ಜಿಸಬೇಕಾ ? ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಕುದಿಯುತ್ತಿದೆ. ಬಿಜೆಪಿಯ ಯಾವೊಬ್ಬ ಮುಖಂಡರನ್ನೂ ನಾನು ಸಂರ್ಪಸಿಲ್ಲ. ಆದರೆ, ನಾನು ಪ್ರವಾಸಕ್ಕೆ ಹೋದಲ್ಲೆಲ್ಲ ಆ ಪಕ್ಷದವರು ನನ್ನನ್ನು ಭೇಟಿಯಾಗಿ, ಅಸಮಾಧಾನ ತೋಡಿಕೊಳ್ಳುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net