ವೆಂಕಟಯ್ಯನಛತ್ರ ಗ್ರಾ.ಪಂ ಕಾಂಗ್ರೆಸ್ ವಶ

05raju5 (1)
Published on

ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಗ್ರಾಮ ಪಂಚಾಯಿತಿ ಕಾಂಗ್ರೆಸ್ ವಶವಾಗಿದ್ದು, ನೂತನ ಅಧ್ಯಕ್ಷರಾಗಿ ಆರ್. ಲಾವಣ್ಯ , ಉಪಾಧ್ಯಕ್ಷರಾಗಿ ಬಿ.ವಿ. ಮಂಜುನಾಥ್ ಆಯ್ಕೆಯಾಗಿದ್ದಾರೆ.

ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಹಿಂದುಳಿವ ವರ್ಗ ಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್‌ಸಿ ವರ್ಗಕ್ಕೆ ನಿಗಧಿಯಾಗಿತ್ತು. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಆರ್. ಲಾವಣ್ಯ, ಬಿ.ವಿ. ಮಂಜುನಾಥ್, ಬಿಜೆಪಿ ಬೆಂಬಲಿತರಾಗಿ ಪ್ರಮೀಳಾ, ಕೃಷ್ಣಮೂರ್ತಿ ಅವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಮತದಾನದಲ್ಲಿ 21 ಸದಸ್ಯರ ಬಲದಲ್ಲಿ ಕಾಂಗ್ರೆಸ್ ಬೆಂಬಲಿತರಾದ ಲಾವಣ್ಯ ಮತ್ತು ಮಂಜುನಾಥ್ ಅವರಿಗೆ ಕ್ರಮವಾಗಿ 11 ಮತಗಳು, ಬಿಜೆಪಿ ಬೆಂಬಲಿತರಾದ ಪ್ರಮೀಳಾ ಮತ್ತು ಕೃಷ್ಣಮೂರ್ತಿ ಅವರಿಗೆ 10 ಮತಗಳು ಬಂದವು.

ಚುನಾವಣಾಕಾರಿಯಾಗಿದ್ದ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಮಂಜುನಾಥ್ ಅಧ್ಯಕ್ಷರಾಗಿ ಲಾವಣ್ಯ ಮತ್ತು ಉಪಾಧ್ಯಕ್ಷರಾಗಿ ಮಂಜುನಾಥ್‌ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು. ಪಿಡಿಓ ರಾಜೇಂದ್ರಪ್ರಸಾದ್, ಎಸ್‌ಡಿಎ ಜಗದೀಶ್ ಕರ್ತವ್ಯ ನಿರ್ವಹಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚಿಕ್ಕಮಹದೇವ್, ತಾ.ಪಂ. ಮಾಜಿ ಸದಸ್ಯ ಮಹದೇವಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ರಂಗಸ್ವಾಮಿ, ಹೊಸೂರು ಜಗದೀಶ್, ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ನಾಗವಳ್ಳಿ ನಾಗಯ್ಯ, ಸೋಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷೆ ಎಸ್. ಶೈಲಜಾ, ಉಪಾಧ್ಯಕ್ಷ ಉಮೇಶ್, ಸದಸ್ಯರಾದ ರಂಗಸ್ವಾಮಿ, ಬಿ. ಶಿವಮಲ್ಲು, ನೀಲಮ್ಮ, ಲೀಲಾ, ಜಯಲಕ್ಷ್ಮಿ, ಸ್ವಾಮಿ, ಶ್ರೀಕಂಠಸ್ವಾಮಿ, ಎ.ಎಂ. ಸೋಮಣ್ಣ, ಚಂದ್ರಮ್ಮ, ಶೃತಿ, ಶೇಖರ್, ಉಮಾ ಮಹೇಶ್ವರಿ, ಸುನೀತಾ, ಕೆಂಪರಾಜು, ಕವಿತಾ, ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net