ಇಂದು ಫಲಿತಾಂಶ, ಕದನ ಕುತೂಹಲಕ್ಕೆ ತೆರೆ

IMG_20230512_164140.jpg
Published on

ದಾವಣಗೆರೆ : ಜಿಲ್ಲೆಯ 7 ಕ್ಷೇತ್ರಗಳಲ್ಲಿ ಯಾವ ಪಕ್ಷ ಹಿಡಿತ ಸಾಧಿಸಲಿದೆ?, ಕಳೆದ ಬಾರಿ 5 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಅವುಗಳನ್ನು ಉಳಿಸಿಕೊಳ್ಳುವುದೆ?, ಇಬ್ಬರು ಶಾಸಕರನ್ನು ಹೊಂದಿದ್ದ ಕಾಂಗ್ರೆಸ್‌ನ ಕೈ ಮೇಲಾಗುವುದೆ?, ಜೆಡಿಎಸ್ ಮತ್ತೆ ಖಾತೆ ತೆರೆಯುವುದೆ?, ಪಕ್ಷೇತರರ ಭವಿಷ್ಯ ಏನಾಗಲಿದೆ?.
 ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ದಿನ ಬಂದೇಬಿಟ್ಟಿದೆ. ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ಮತಗಳ ಎಣಿಕೆ ಕಾರ್ಯ ಶನಿವಾರ ನಡೆಯಲಿದ್ದು ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ.
 ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪುನರಾíಯ್ಕೆಯಾಗುವರೆ ಅಥವಾ ಬಿಜೆಪಿಯ ಬಿ.ಜಿ. ಅಜಯಕುಮಾರ್ ಮೊದಲ ಬಾರಿ ವಿಧಾನಸಭೆ ಪ್ರವೇಶಿಸುವರೆ ಎಂಬುದು ಗೊತ್ತಾಗಲಿದೆ.
 ದಾವಣಗೆರೆ ಉತ್ತರದಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಳೆದ ಬಾರಿಯ ಸೋಲಿನಿಂದ ಹೊರ ಬರುವರೆ, ಇಲ್ಲವೆ ಬಿಜೆಪಿಯ ಲೋಕಿಕೆರೆ ನಾಗರಾಜ್‌ಗೆ ಅದೃಷ್ಟ ಒಲಿಯುವುದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net