ಸೈನಿಕರಿಗೆ ಬಸರಾಳು ಗ್ರಾಮಸ್ಥರಿಂದ ಪುಷ್ಪಾರ್ಚನೆ

Patahsanchalana)
Published on
ಮಂಡ್ಯ: ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆಂದು ಆಗಮಿಸಿರುವ ಅರೆಸೇನಾಪಡೆ ಹಾಗೂ ಪೊಲೀಸರ ಮೇಲೆ ಪುಷ್ಪಾರ್ಚನೆ ಮಾಡುವ ಮೂಲಕ ಬಸರಾಳು ಗ್ರಾಮಸ್ಥರು ಗೌರವ ಸೂಚಿಸಿದರು.
ಮುಕ್ತ, ನ್ಯಾಯಸಮ್ಮತ ಚುನಾವಣೆ ಮಾಡುವ ನಿಟ್ಟಿನಲ್ಲಿ ಜನರಿಗೆ ಧೈರ್ಯ ತುಂಬಲು ಸೈನಿಕರು ಹಾಗೂ ಬಸರಾಳು, ಕೆರಗೋಡು, ಶಿವಳ್ಳಿ ಠಾಣೆ ಪೊಲೀಸರು ಗ್ರಾಮದ ಮಂಡ್ಯ-ನಾಗಮಂಗಲ ರಸ್ತೆ , ನಾಗಮಂಗಲ-ಕೊಪ್ಪ ರಸ್ತೆ, ತೇರು ಬೀದಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ಈ ವೇಳೆ ಗ್ರಾಮಸ್ಥರು ಎಲ್ಲರ ಮೇಲೆ ಹೂವಿನ ಮಳೆ ಸುರಿಸಿದರು. ಕೆರಗೋಡು ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಆರ್.ರಘು, ಬಸರಾಳು ಎಸ್‌ಐ ಶೇಷಾದ್ರಿಕುಮಾರ್ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net