

ಬಾಗೂರು : ಹೋಬಳಿಯ ಕಾರೇಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆನ್ನೇನಹಳ್ಳಿ ಗ್ರಾಮದ ಸಿ.ಡಿ. ರೇವಣ್ಣ ಉಪಾಧ್ಯಕ್ಷರಾಗಿ ಕೆ. ಎಸ್. ದೇವರಾಜ್, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆ.ಬಿ.ನಟರಾಜ್ ಹಾಗೂ ಶಿವಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ವಾಸಿಮ್ ಷರೀಫ್ ಅವಿರೋಧ ಆಯ್ಕೆ ಪ್ರಕಟಿಸಿದರು.
ನೂತನ ಅಧ್ಯಕ್ಷ ಸಿ.ಡಿ.ರೇವಣ್ಣ ಮಾತನಾಡಿ, ಜಿಲ್ಲಾ ಬ್ಯಾಂಕ್ ನ ನಿರ್ದೇಶಕರಾಗಿರುವ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಹೆಚ್ಚಿನ ಸಹಕಾರ ಪಡೆದು ಸಂಘದ ನಿರ್ದೇಶಕರುಗಳ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಸಂಘಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಿಸುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್, ನಿರ್ದೇಶಕರುಗಳಾದ ಸಿದ್ದೇಗೌಡ, ಪುನೀತ್, ಕವಿತಾ, ವಿಜೇಶ್, ಗಂಗಾಣಮ್ಮ, ನಾಗೇಶ್, ಗಂಗಾಧರಯ್ಯ, ಮುಖಂಡರುಗಳಾದ ಕೆ.ಟಿ.ನಟೇಶ್, ರವಿಶಂಕರ್, ನಾಗೇಂದ್ರ, ಸಿ.ಜೆ.ಕುಮಾರ್, ಅಣತಿ ವೆಂಕಟೇಶ್, ಮಂಜುನಾಥ್, ಉ ಮಾಯಿನ್, ಸಮಿಉಲ್ಲಾ, ಕುಳ್ಳೇಗೌಡ, ನಾರಾಯಣಪ್ಪ, ಎನ್.ಬಿ.ನಾಗರಾಜ್, ಪುಟ್ಟಸ್ವಾಮಿ, ಹೊಸೂರು ಚಂದ್ರಪ್ಪ, ನಾಗೇನಹಳ್ಳಿ ವಿಜಯ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ರಾಜೇಶ್, ಸಹ ಕಾರ್ಯದರ್ಶಿ ಮನುಪ್ರಸಾದ್, ಯತೀಶ್, ಹಾಜರಿದ್ದರು .