

ಧಾರವಾಡ: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದಲ್ಲಿ ಸೋಮವಾರ ಏರ್ಪಡಿಸಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ದಪ್ಪ ಪ್ಯಾಟಿ, ಉಪಾಧ್ಯಕ್ಷರಾಗಿ ಅರ್ಜುನ ಪತ್ರಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಹಾಗೂ ಉಪಾದ್ಯಕ್ಷರಿಗೆ ನಿರ್ದೇಶಕರು ಸನ್ಮಾನಿಸಿದರು. ಮಂಜುನಾಥ ಹೊರಕೇರಿ, ಉಳವಪ್ಪ ದಾಸನೂರ, ಶಿವಾನಂದ ಮುದ್ದಿ, ಚನ್ನಬಸಪ್ಪ ಸಾಲಿ, ನಿಂಗಪ್ಪ ಬೇಕವಾಡಕರ, ಉಮೇಶ ಭೂಮಣ್ಣವರ, ಕವಿತಾ ಘೋರ್ಪಡೆ, ಶಾಂತಾ ಬೇಕವಾಡಕರ, ಬಸವರಾಜ ಮೊರಬ, ಹಸನಪ್ಪ ತಳವಾರ, ಇತರರು ಇದ್ದರು.