ದೊಡ್ಡಬೇಲಾಳು ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

WhatsApp Image 2024-05-13 at 4.53.57 PM
ಪಿರಿಯಾಪಟ್ಟಣ ತಾಲೂಕು ದೊಡ್ಡಬೇಲಾಳು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆರ್.ಎಸ್.ಮಹದೇವ್, ಉಪಾಧ್ಯಕ್ಷರಾಗಿ ಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Published on

ರಾವಂದೂರು: ದೊಡ್ಡಬೇಲಾಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆರ್.ಎಸ್.ಮಹದೇವ್, ಉಪಾಧ್ಯಕ್ಷರಾಗಿ ಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಿರಿಯಾಪಟ್ಟಣ ತಾಲೂಕು ದೊಡ್ಡಬೇಲಾಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಿಗದಿಯಾಗಿತ್ತು. ಆರ್.ಎಸ್.ಮಹದೇವ್, ಕೃಷ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಹಕಾರ ಇಲಾಖೆಯ ಚುನಾವಣಾಧಿಕಾರಿ ಇತೇಂದ್ರ ತಿಳಿಸಿದರು.

ನಿರ್ದೇಶಕರಾದ ಅಣ್ಣೇಗೌಡ, ವೀರಭದ್ರ, ಕುಮಾರ್, ಕನಕಮ್ಮ, ಕೃಷ್ಣ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸೂರ್ಯಕೋಟಿ ಪ್ರಕಾಶ್‌ಮೂರ್ತಿ, ಮುಖಂಡರಾದ ಲಕ್ಷ್ಮೀಕಾಂತರಾಜೇ ಅರಸ್, ವಿಜಿ ಕೊಪ್ಪಲು ಲೋಕೇಶ್, ಜವರೇಗೌಡ, ದೇವೇಂದ್ರ, ಅಂಬಿ, ಮಾಸ್ಟರ್ ಮೋಹನ್, ಸೀಗೂರು ವಿಜಯ್‌ಕುಮಾರ್, ತಾಪಂ ಸದಸ್ಯ ಪ್ರಕಾಶ್, ರಮೇಶ್, ಸಣ್ಣ ತಮ್ಮೇಗೌಡ, ವಿಜಯ ಅರಸ್, ಪರಮೇಶ್, ಕಾರ್ಯದರ್ಶಿ ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net