ಮಾರಸಿಂಗನಹಳ್ಳಿ ಡೇರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

12M.D.R.1
ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎನ್.ಪುಟ್ಟಸ್ವಾಮಿ, ಉಪಾಧ್ಯಕ್ಷರಾಗಿ ಬಿ.ಎನ್.ಶೋಭಾ ಅವಿರೋಧವಾಗಿ ಆಯ್ಕೆಯಾದರು. ಮಾರಸಿಂಗನಹಳ್ಳಿ ರಾಮಚಮದ್ರು, ಗೂಳಿಗೌಡ, ಕೆ.ಟಿ.ಲಕ್ಷ್ಮೀ ಇತರರು ಇದ್ದರು.
Published on

ಮದ್ದೂರು: ತಾಲೂಕಿನ ಮಾರಸಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಎಂ.ಎನ್.ಪುಟ್ಟಸ್ವಾಮಿ (ಪುಟ್ಟ) ಹಾಗೂ ಉಪಾಧ್ಯಕ್ಷರಾಗಿ ಬಿ.ಎನ್.ಶೋಭಾ ಗೂಳಿಗೌಡ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸುಧಾಕರ್ ಅವಿರೋಧ ಆಯ್ಕೆ ಘೋಷಿಸಿದರು.

ಎಂಪಿಸಿಎಸ್ ನಿರ್ದೇಶಕರಾದ ಗೂಳಿಗೌಡ, ಕೆ.ಟಿ.ಲಕ್ಷ್ಮೀ ಪುಟ್ಟಸ್ವಾಮಿ, ಬಿ.ಡಿ.ಸವಿತಾ ಉಮೇಶ್, ಅಪಾಜ್ಜಿಗೌಡ, ಅಪ್ಪಾಜಿ, ಆನಂದಮ್ಮ, ಎಂ.ಎನ್.ಶ್ರೀಕಂಠ, ಜಯಶೀಲಾ ಸೋಮಶೇಖರ್, ಎಂ.ಶಶಿಕಲಾ ರಾಮಚಂದ್ರ, ದೇವಿರಮ್ಮ ವೀರಭದ್ರಸ್ವಾಮಿ, ಪಿ.ಎಸ್.ಸವಿತಾ, ಮುಖಂಡರಾದ ಮಾರಸಿಂಗನಹಳ್ಳಿ ರಾಮಚಂದ್ರು, ಎಂ.ಜಿ.ನಂಜೇಶ್, ಕೃಷ್ಣಪ್ಪ, ಉಮೇಶ್, ಮನುರಾಜ, ರಾಜಣ್ಣ, ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net