

ಕೆ.ಆರ್.ನಗರ: ಪಟ್ಟಣದ ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಎಂ.ಪ್ರಕಾಶ್, ಉಪಾಧ್ಯಕ್ಷರಾಗಿ ಮೋಹನ್‌ರಾವ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಕಾರಿ ಎಸ್.ರವಿ ಆಯ್ಕೆಯನ್ನು ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಸುಭಾಷ್, ವೈ.ಆರ್.ಶಿವಕುಮಾರ್, ಕೆ.ಸಿ.ನಾಗರಾಜು, ಸೈಯದ್‌ಅಸ್ಲಾಂ, ಕೆ.ಎನ್.ಶಂಕರ್, ಅವಿನಾಶ್.ಪಿ.ಪಟೇಲ್, ಸಿ.ಎಂ.ಶಶಿಕಲಾ, ಶಿಲ್ಪರಾಜು, ಕೆ.ಎಲ್.ರಾಜೇಶ್, ಎಂ.ಎ.ರವೀಂದ್ರ ಕುಮಾರ್, ಸಿಇಒ ಬಿ.ಡಿ.ರೇಣುಕಾಪ್ರಸನ್ನ ಇದ್ದರು.
ಸಂಘದ ಪದಾಕಾರಿಗಳನ್ನು ಅಭಿನಂದಿಸಿದ ಮಾಜಿ ಅಧ್ಯಕ್ಷ ವೈ.ಆರ್.ಪ್ರಕಾಶ್ ನಿಮ್ಮ ಆಡಳಿಯ ಅವಯಲ್ಲಿ ಸದಸ್ಯರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿ ಉತ್ತಮ ಕಾರ್ಯ ಮಾಡಿದರೆ ನಾವು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.