ಪವನ್ ಶಾಲಾ ಸಂಸತ್ ಪ್ರತಿನಿಧಿಗಳ ಆಯ್ಕೆ

11 Dwd 2
Published on

ವಿಜಯವಾಣಿ ಸುದ್ದಿಜಾಲ ದಾರವಾಡ
ನಗರದ ಪವನ್ ಆಂಗ್ಲ ಮಾಧ್ಯಮ ಶಾಲಾ ಸಂಸತ್ ಪ್ರತಿನಿಧಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಪ್ರಧಾನಮಂತ್ರಿಗಳಾಗಿ ಮಾನ್ಯ ನಾಯಕ್ ಹಾಗೂ ನಿಯಾಜುದ್ದಿನ್ ಮಣಿಗಾರ, ಸ್ಪೀಕರ್ ಆಗಿ ಸೋನಲ್ ಶಿರಗುಪ್ಪಿ, ಉಪ ಸ್ಪೀಕರ್‌ಗಳಾಗಿ ಆಗಿ ಶ್ರಾವಣಿ ಉಪಾಸೆ ಹಾಗೂ ವಿನಯ ನವಲಗುಂದ ಚುನಾಯಿತರಾದರು. ಪ್ರಾಚಾರ್ಯ ವಿಕ್ರಂ ಮಹಾಶಬ್ದೆ ಪ್ರಮಾಣವಚನ ಬೋಽಸಿದರು.
ಸಂಸ್ಥೆಯ ಉಪಾಧ್ಯಕ್ಷೆ ರತ್ನಾ ಎಸ್. ಪಾಟೀಲ ಮತ ಚಲಾಯಿಸುವ ಮೂಲಕ ಚುನಾವಣೆಗೆೆ ಚಾಲನೆ ನೀಡಿದರು. ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಹಾಗೂ 8, 9, 10ನೇ ತರಗತಿಯ ವಿದ್ಯಾರ್ಥಿಗಳು ಮತ ಚಲಾ¬ಸಿದರು.
ಮುಖ್ಯ ಸಂಯೋಜಕಿ ಸವಿತಾ ಕಂಬಿ, ಸುಜಾತಾ ಮೊಖಾಶಿ, ಇತರರಿದ್ದರು. ಸಮೀಕ್ಷಾ ಕಲಾಲ ನಿರೂಪಿಸಿದರು. ಇಶ್ರತ್ ಜಾಗೀರದಾರ ಸ್ವಾಗತಿಸಿದರು. ಜಯಲಕ್ಷ್ಮೀ ದೇಸಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net