

ಬೆಳ್ತಂಗಡಿ: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪದ್ಮುಂಜ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಬುಧವಾರ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ರಕ್ಷಿತ್ ಪಿ.ಪಣೆಕ್ಕರ, ನಾರಾಯಣ ಗೌಡ, ಉದಯ ಭಟ್.ಕೆ, ಡೀಕಯ್ಯ ಗೌಡ, ರುಕ್ಮಯ್ಯ ಗೌಡ, ಯಾನೆ ಪ್ರಭಾಕರ, ಪ್ರಸಾದ್ ಎ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಉದಯ ಬಿ.ಕೆ., ಹಿಂದುಳಿದ ಬಿ ಕ್ಷೇತ್ರದಿಂದ ಅಶೋಕ ಪಿ, ಮಹಿಳಾ ಕ್ಷೇತ್ರದಿಂದ ಶೀಲಾವತಿ, ಶಾರದಾ ಆರ್.ರೈ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಚಂದನ್ ಕುಮಾರ್ ಎ, ಪರಿಶಿಷ್ಟ ಪಂಗಡದಿಂದ ದಿನೇಶ್ ನಾಯ್ಕ ಅವರು ಬಿ.ವಿ.ಪ್ರತಿಮಾ ನಾಮಪತ್ರ ಸಲ್ಲಿಸಿದರು.
ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬಾಲಕೃಷ್ಣ ಗೌಡ, ಕಣಿಯೂರು ಶಕ್ತಿ ಕೇಂದ್ರ ಪ್ರಮುಖ ಯತೀಶ್ ಶೆಟ್ಟಿ ಪಣೆಕ್ಕರ, ಕಣಿಯೂರು ಪಂಚಾಯಿತಿ ಅಧ್ಯಕ್ಷ ಸೀತಾರಾಮ ಮಡಿವಾಳ, ಬಂದಾರು ಶಕ್ತಿ ಕೇಂದ್ರ ಪ್ರಮುಖ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಮೊಗ್ರು ಶಕ್ತಿ ಕೇಂದ್ರ ಪ್ರಮುಖ ಗಂಗಾಧರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.