ಎನ್‌ಐಇ ಸೊಸೈಟಿಗೆ ಪದಾಧಿಕಾರಿಗಳ ಆಯ್ಕೆ

Picture5
Published on

ಮೈಸೂರು: ಎನ್‌ಐಇ ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಾ.ಎಂ.ಎಸ್.ರಂಗನಾಥ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಎನ್‌ಐಇ ಸಂಸ್ಥೆಯಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಉಪಾಧ್ಯಕ್ಷರಾಗಿ ನಿರಂಜನ್ ಸಿಂಹ, ಕಾರ್ಯದರ್ಶಿಯಾಗಿ ಎಸ್.ಬಿ.ಉದಯ್‌ಶಂಕರ್, ಖಜಾಂಚಿಯಾಗಿ ಎನ್.ಸತ್ಯಕುಮಾರ್ ಆಯ್ಕೆಯಾಗಿದ್ದಾರೆ.

ಅಂತೆಯೇ ಆಡಳಿತ ಮಂಡಳಿಯ ನಿರ್ದೇಶಕರಾಗಿ ಶ್ರೀನಾಥ್ ಬಟ್ನಿ, ಆರ್.ಎಸ್.ರಾಜ್‌ಕುಮಾರ್, ಎಚ್.ಎಸ್.ದೀಪಕ್, ಡಾ.ಎಂ.ಕೆ.ನಾಗರಾಜ್, ಎಂ.ಎಸ್.ರಾಮ್ ಪ್ರಸಾದ್, ಶ್ರೀನಾಥ್ ನಂದಮುನಿ ಆಯ್ಕೆಯಾಗಿದ್ದಾರೆ. ಮುಂದಿನ 5 ವರ್ಷಗಳ ಕಾಲ ಸದರಿ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net