ಎಸ್‌ಎಂ ಕಲಾ-ಕ್ರೀಡಾ ಸಂಘ ಪದಾಧಿಕಾರಿಗಳ ಆಯ್ಕೆ

Published on

ಪೆರ್ಲ: ಬೆದ್ರಂಪಳ್ಳದ ಎಸ್.ಎಂ.ಕಲಾ ಹಾಗೂ ಕ್ರೀಡಾ ಸಂಘದ ವಾರ್ಷಿಕ ಮಹಾಸಭೆ ಬೆದ್ರಂಪಳ್ಳ ಎಎಲ್‌ಪಿ ಶಾಲೆಯಲ್ಲಿ ಜರುಗಿತು. ಸಂಘದ ಅಧ್ಯಕ್ಷ ಪ್ರಕಾಶ್ ಕೆ. ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಜನಾರ್ದನ ಕೆ. ವರದಿ ಮಂಡಿಸಿದರು. ಸಂಘ ರಜತ ಸಂಭ್ರಮದಲ್ಲಿದ್ದು ವರ್ಷ ಪೂರ್ತಿಯಾಗಿ 25 ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. 2025 ಏಪ್ರಿಲ್ 24ರಂದು ರಜತ ಮಹೋತ್ಸವ ಸಮಾರೋಪ ಸಮಾರಂಭ ನಡೆಸಲಾಗುವುದು. ಪದಾಧಿಕಾರಿಗಳ ಆಯ್ಕೆ ನಡೆಯಿತು. ಚಂದ್ರ ನಾಯ್ಕ ಎಂ.(ಅಧ್ಯಕ್ಷ), ಪ್ರಕಾಶ್ ಕೆ.(ಉಪಾಧ್ಯಕ್ಷ), ಅವಿನಾಶ್ ಸಿ.ಎಚ್(ಪ್ರ.ಕಾರ್ಯದರ್ಶಿ), ಸಂಧ್ಯಾ ಕೆ.(ಜತೆ ಕಾರ್ಯದರ್ಶಿ), ರಮೇಶ್ ಕೆ.(ಕೋಶಾಧಿಕಾರಿ) ಅವರನ್ನು ಆಯ್ಕೆ ಮಾಡಲಾಯಿತು. ಜನಾರ್ದನ ಕೆ. ಸ್ವಾಗತಿಸಿದರು. ಅಶ್ವಿತ ಕುಮಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net