ಬಳ್ಳಾರಿ : ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ, ರಾಜ್ಯ ಪರಿಷತ್ ಸದಸ್ಯ ಮತ್ತು ಖಜಾಂಚಿ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4 ರ ವರೆಗೆ ಸಂಘದ ಕಚೇರಿಯಲ್ಲಿ ಮತದಾನ ಜರುಗಲಿದೆ. ಸಂಜೆಯ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬರಲಿದೆ. ಲೋಕೇಶ್ ಮತ್ತು ಆಸಿಫ್ ತಂಡದ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಇಲಾಖೆಯ ಆರ್.ಎಚ್.ಲೋಕೇಶ್ ಮತ್ತು ಸ್ಥಳೀಯ ಲೆಕ್ಕಪರಿಶೋಧಕ ಇಲಾಖೆಯ ಆಸಿಫ್, ರಾಜ್ಯ ಪರಿಷತ್ ಗೆ ಡಿಡಿಪಿಐ ಕಚೇರಿಯ ಮಹಾಂತೇಶ್
ಮತ್ತು ಗ್ರಾಮಲೆಕ್ಕಾಧಿಕಾರಿ ಸುರೇಶ್ ಹಾಗೂ ಖಜಾಂಚಿ ಸ್ಥಾನಕ್ಕೆ ತಾಲೂಕು ಪಂಚಾಯತಿ ಸಹಾಯಕ ಲೆಕ್ಕಾಧಿಕಾರಿ ಶರಣಪ್ಪ ಮತ್ತು ಆರೋಗ್ಯ ಇಲಾಖೆಯ ಹನುಮಂತರಾಯ ನಡುವೆ ಚುನಾವಣೆ ನಡೆಯಲಿದೆ.
ಎರಡು ತಂಡಗಳು 68 ಮತದಾರರನ್ನು ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.
ಆಸಿಫ್ ನೇತೃತ್ವದ ತಂಡ ತಮ್ಮನ್ನು ಬೆಂಬಲಿಸುವಂತೆ ಹಲವು ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬದು ಚರ್ಚೆ ಗೆ ಗ್ರಾಸವಾಗಿದೆ.ಕಳೆದ ಹಲವು ವರ್ಷಗಳಿಂದ ಸಂಘವನ್ನು ನಡೆಸುತ್ತ ಏಕತಾನತೆಯನ್ನು ಉಂಟುಮಾಡಿರುವ ಗುಂಪಿಗೆ ಈ ಬಾರಿ ಆಯ್ಕೆಯಾಗಿರುವ ಬಹತೇಕ ಯುವ ಮತದಾರರು ಬದಲಾವಣೆ ಬಯಸಿದ್ದಾರೆ ಎನ್ನಲಾಗುತ್ತಿದೆ.
ಎರಡು ತಂಡಗಳಿಗೂ ಗೆಲ್ಲುವ ವಿಶ್ವಾಸವಿದ್ದು
ಮತದಾರ ಪ್ರಭು ಯಾರಿಗೆ ಗೆಲುವಿನ ಮಾಲೆ ಹಾಕಲಿದ್ದಾರೆಂಬುದು ಕಾದು ನೋಡಬೇಕಿದೆ.