

ಮೈಸೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಬಸವರಾಜು ಹಿನಕಲ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಕೆ.ನಾಗರಾಜ, ಬಿ.ವಿ.ಬಸವರಾಜು (ಚುನಾಯಿತ ಉಪಾಧ್ಯಕ್ಷರು), ಎಂ.ನಟರಾಜು (ದೇಣಿದಾರ ಉಪಾಧ್ಯಕ್ಷ), ಅನುಸೂಯ ಗಣೇಶ್ (ಚುನಾಯಿತ ಮಹಿಳಾ ಉಪಾಧ್ಯಕ್ಷೆ), ಕೆ.ಶಿವಕುಮಾರ್ (ಪ್ರಧಾನ ಕಾರ್ಯದರ್ಶಿ), ಎನ್.ಜಿ.ಗಿರೀಶ್, ಕೆ.ಗಿರಿಕುಮಾರ್ (ಕಾರ್ಯದರ್ಶಿ), ಎಂ.ಕುಮಾರ್ (ದೇಣಿದಾರ ಕಾರ್ಯದರ್ಶಿ), ಎನ್.ಬಿ.ಭಾಗ್ಯ (ಚುನಾಯಿತ ಮಹಿಳಾ ಕಾರ್ಯದರ್ಶಿ), ಎಲ್.ಪಿ.ಧರ್ಮಮಂಜುನಾಥ್ (ಕೋಶಾಧ್ಯಕ್ಷ) ಅವರು ಆಯ್ಕೆಯಾಗಿದ್ದಾರೆ ಎಂದು ಉಪ ಚುನಾವಣಾಧಿಕಾರಿ ತಿಬ್ಬಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.