

ಸುಂಟಿಕೊಪ್ಪ: ಕೊಡಗು ಜಿಲ್ಲಾ ಮರ ಕೆಲಸ ಹಾಗೂ ತಲೆ ಹೊರೆ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2025-26ನೇ ಸಾಲಿನ ಅಧ್ಯಕ್ಷರಾಗಿ ಆರ್.ಕೆ.ಹರೀಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ.ಕುಟ್ಟಪ್ಪ ಅವರನ್ನು ಆಯ್ಕೆಗೊಳಿಸಲಾಯಿತು.
ಸಂಘದ ಕಚೇರಿ ಆವರಣದಲ್ಲಿ ಇತ್ತೀಚೆಗೆ ನಡೆಸಲಾದ ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ರಮೇಶ್, ಕಾರ್ಯದರ್ಶಿಯಾಗಿ ರಾಧಾಕೃಷ್ಣನ್, ಸಹ ಕಾರ್ಯದರ್ಶಿಯಾಗಿ ಜಹೀದ್, ಖಜಾಂಜಿಯಾಗಿ ಸಂತೋಷ್, ಸಮಿತಿ ಸದಸ್ಯರಾಗಿ ಜೆ.ಕೆ.ಮಣಿ, ಸತೀಶ್, ಅಮನ್, ರಾಜನ್, ಸತ್ಯ ಹಾಗೂ ಕುಂಞಕುಟ್ಟಿ ಅವರನ್ನು ಆಯ್ಕೆಗೊಳಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.