ನೂರಾನಿ ಜಮಾತ್ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

NRD SANMAN
Published on

ನರಗುಂದ: ಸಿದ್ಧನಬಾವಿ ಓಣಿಯ ನೂರಾನಿ ಜಮಾತ್ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಪಟ್ಟಣದಲ್ಲಿ ಇತ್ತೀಚೆಗೆ ನೇಮಕ ಮಾಡಲಾಯಿತು.

ಸಂಘದ ಗೌರವಾಧ್ಯಕ್ಷರಾಗಿ ರಾಜೇಸಾಬ್ ಕಿಲ್ಲೇದಾರ, ಅಧ್ಯಕ್ಷರಾಗಿ ಇಮಾಮ್ುಸೇನ ಕಿಲ್ಲೇದಾರ, ಉಪಾಧ್ಯಕ್ಷರಾಗಿ ಅಮೀರ್​ಖಾನ್ ಕಾಶೀಂಸಾಬ್ ಖಲೀಫ್, ಕಾರ್ಯದರ್ಶಿ ದಾದಾಪೀರ್ ಮಕ್ತುಂಸಾಬ್ ಕಿಲ್ಲೇದಾರ, ಖಜಾಂಚಿ ಬುಡ್ನೇಸಾಬ್ ಬೀಳಗಿ, ಸಹ ಕಾರ್ಯದರ್ಶಿಯಾಗಿ ಮೈಬುಸಾಬ್ ಮಕ್ತುಂಸಾಬ್ ಕಿಲ್ಲೇದಾರ ಹಾಗೂ ಸದಸ್ಯರಾಗಿ ದಾವಲ್​ಸಾಬ್ ಕಿಲ್ಲೇದಾರ, ಬಾಪುಸಾಬ್ ಇಮಾಮ್ಾಬ್ ಕಿಲ್ಲೇದಾರ, ಸೈಯದ್ ಕಡಕೋಳ, ಹಜರತ್ ಕಿಲ್ಲೇದಾರ ನೇಮಕಗೊಂಡಿದ್ದರಿಂದ ನೂತನ ಪದಾಧಿಕಾರಿಗಳನ್ನು ಮುಸ್ಲಿಂ ಸಮಾಜದ ಹಿರಿಯರು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net