

ವಿರಾಜಪೇಟೆ: ನಗರದಲ್ಲಿರುವ ನವಜ್ಯೋತಿ ಸಂಘದ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ, 2025-26ನೇ ಸಾಲಿನ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು.
ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಸನ ಮಾತನಾಡಿ, ಸಂಘ ಸ್ಥಾಪನೆಗೊಂಡು 31ವರ್ಷಗಳಾಗಿವೆ. ಸಾಮಾಜಿಕ ಕಳಕಳಿಯೊಂದಿಗೆ ಸಂಘ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಜನಸಾಮಾನ್ಯರಲ್ಲಿ ಉತ್ತಮ ಅಭಿಮತವಿದೆ. ಸಂಘದಲ್ಲಿ ಸದಸ್ಯಬಲ ವಿರಳವಾಗಿದ್ದು ಹೆಚ್ಚಿಸುವ ಪ್ರಯತ್ನ ಹಾಗೂ ಯುವ ಮಿತ್ರರನ್ನು ಸಂಘದ ಸದಸ್ಯರನ್ನಾಗಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಮುಂದಾಗಬೇಕು ಎಂದು ಹೇಳಿದರು.
ಪದಾಧಿಕಾರಿಗಳು: ಅಧ್ಯಕ್ಷರಾಗಿ ಜಾಕೀರ್ ಹುಸೈನ್, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಸ್.ಸುನೀಶ್, ಉಪಾಧ್ಯಕ್ಷರಾಗಿ ಬ್ಲೇಜಿ ಸಿಕ್ವೇರ, ಕೋಶಾಧಿಕಾರಿಯಾಗಿ ಧನು, ಗೌರವ ಅಧ್ಯಕ್ಷರಾಗಿ ಮರ್ವಿನ್ ಲೋಬೊ ಹಾಗೂ 21ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.