ಹುಬ್ಬಳ್ಳಿ ತಾಲೂಕು ಬಣಜಿಗ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

h3-Banajga
Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಹುಬ್ಬಳ್ಳಿ ತಾಲೂಕು ಘಟಕಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.

ಗುರುಪಾದಪ್ಪ ಶಿರೂರು (ಅಧ್ಯಕ್ಷ), ಸಂದೀಪ ಕುಂಬಿ (ಉಪಾಧ್ಯಕ್ಷ), ಬಸವರಾಜ ಸೋಮನಕಟ್ಟಿ (ಪ್ರಧಾನ ಕಾರ್ಯದರ್ಶಿ), ರವಿ ಸುಂಕದ (ಸಹ ಕಾರ್ಯದರ್ಶಿ), ನಿತಿನ್ ನಾಶಿ ( ಖಜಾಂಚಿ), ವಿಜಯಕುಮಾರ ( ಜಯಣ್ಣ ಶೆಟ್ಟರ್), ಶಿವಬಸಪ್ಪ ಶೆಟ್ಟರ್, ಲಿಂಗರಾಜ ಧಾರವಾಡ ಶೆಟ್ಟರ್, ಶಿವರಾಜ ಅರಕೇರಿ, ಮಲ್ಲಿಕಾರ್ಜುನ ಶಿರಗುಪ್ಪಿ, ರವಿ ಹುಬ್ಬಳ್ಳಿ, ಪ್ರಭು ಶೆಟ್ಟರ್ (ಸದಸ್ಯರು) ಅವರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ ಆಯ್ಕೆಯಾದ ಪದಾಧಿಕಾರಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಆಡಳಿತ ಮಂಡಳಿ ಸದಸ್ಯರು, ಬೇರೆ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ನಮ್ಮ ತಾಲೂಕಿನಲ್ಲಿಯೂ ವಿನೂತನ ಸಂಘದ ಚಟುವಟಿಕೆಗಳನ್ನು ಕೈಗೊಂಡು ಇತರರಿಗೆ ಮಾದರಿಯಾಗುವ ಗುರಿ ಇಟ್ಟುಕೊಳ್ಳೋಣ ಎಂದರು.

ಪಾಲಿಕೆಯ ಧೀಮಂತ ಸನ್ಮಾನ ಪುರಸ್ಕೃತ ಚನ್ನಬಸಪ್ಪ ಧಾರವಾಡಶೆಟ್ಟರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ರಾಜ್ಯ ಘಟಕದ ಉಪಾಧ್ಯಕ್ಷ ರಾಜಶೇಖರ ಕವಳಿ, ಧಾರವಾಡ ಜಿಲ್ಲಾಧ್ಯಕ್ಷ ವಿಶ್ವನಾಥ ಅಂಗಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ವೀರಣ್ಣ ಮಳಗೆ, ಜಿಪಂ ಮಾಜಿ ಅಧ್ಯಕ್ಷೆ ಚೈತ್ರಾ ಗುರುಪಾದಪ್ಪ ಶಿರೂರ, ಹಿರಿಯರಾದ ರಾಜಣ್ಣ ಹೊಸಕಟ್ಟಿ, ಶಿವಣ್ಣ ಹುಬ್ಬಳ್ಳಿ, ಬಸವರಾಜ ಮುಷ್ಟಿ, ಶಾಂತಪ್ಪ ಶೆಟ್ಟರ್, ವಿಶ್ವನಾಥ ಬೆಳ್ಳುಳ್ಳಿ, ಬಸವರಾಜ ಶೀಲವಂತರ, ಪ್ರಭು ಶೆಟ್ಟರ್, ತಾರಾದೇವಿ ವಾಲಿ, ವಿದ್ಯಾ ವಂಟಮುರಿ, ವಿಜಯಲಕ್ಷ್ಮೀ ತಿಮ್ಮೊಳಿ, ಶಾಂತಾ ಅಂಗಡಿ, ಭಾರತಿ ವಾಲಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net