

ಮುಂಡರಗಿ: ಪಟ್ಟಣದಲ್ಲಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಫ್. ಪೂಜಾರ ಅಧ್ಯಕ್ಷತೆಯಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಸ್.ಸಿ. ಹರ್ತಿ, ಕಾರ್ಯದರ್ಶಿಯಾಗಿ ಮನೋಹರ ಎಸ್., ಉಪಾಧ್ಯಕ್ಷರಾಗಿ ಉಮೇಶ ಬೂದಿಹಾಳ, ಖಜಾಂಚಿಯಾಗಿ ಪರಶುರಾಮ ಏಳಕೊಳ್ಳಿ, ರಾಜ್ಯ ಪರಿಷತ್ ಸದಸ್ಯರಾಗಿ ಎಸ್.ಎ. ಯರಗುಡಿ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಿಕಾ ನಾಯಕ, ಶಿವಕುಮಾರ ಗಿಂಡಿಮಠ, ನಾಮನಿರ್ದೇಶಕರಾಗಿ ಎನ್.ಆರ್. ಲಮಾಣಿ, ಎಂ.ಎಸ್. ಶೀರನಹಳ್ಳಿ, ಮಂಜು ಹರಿಜನ, ಬಿ.ಡಿ. ಅರ್ಜನಾಳ, ಕೆ.ಐ. ಯರಕುಪ್ಪಿ, ಶಂಕರ ಕಲ್ಲಿಗನೂರ ಆಯ್ಕೆಗೊಂಡಿದ್ದಾರೆ.
ಸಭೆಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಆರ್.ಎಲ್. ಬದಾಮಿ, ಗಂಗಾಧರ ಅಣ್ಣಿಗೇರಿ, ಯುವರಾಜ ಮುಂಡರಗಿ, ಎಸ್.ಆರ್. ರಿತ್ತಿ, ಮುತ್ತು ಗಾರವಾಡ, ರವಿರಾಜ ಪವಾರ, ಎಂ.ಬಿ. ಮೇಟಿ, ಹನುಮರಡ್ಡಿ ಇಟಗಿ, ಬೋಜು ಲಮಾಣಿ, ಆರ್.ಬಿ. ಗೊಡ್ಲಾನೂರ, ಮಹೇಶ ಮೇಟಿ, ಇತರರಿದ್ದರು.