

ಸರಗೂರು : ಕರ್ನಾಟಕ ರಾಜ್ಯ ಗ್ರಾಪಂ ಬಿಲ್ ಕಲೆಕ್ಟರ್ ನೌಕರರ ಸಂಘ ಮೈಸೂರು ಜಿಲ್ಲಾ ಸಮಿತಿ ಸಮಾಲೋಚನಾ ಸಭೆ ಹಾಗೂ ಜಿಲ್ಲಾ ಸಮಿತಿ ಮರುರಚನೆ ಸಭೆ ಭಾನುವಾರ ಜರುಗಿತು.
ಮೈಸೂರು ತಾಲೂಕಿನ ಇಲವಾಲ ಗ್ರಾಪಂ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷ ಲಿಂಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣ್ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಘಕ್ಕೆ ಆಯ್ಕೆ: ಜಿಲ್ಲಾಧ್ಯಕ್ಷರಾಗಿ ಅನಿಲ್‌ಕುಮಾರ್, ಉಪಾಧ್ಯಕ್ಷರಾಗಿ ಎಚ್. ಡಿ. ಕೋಟೆಯ ಶಂಕರ್, ಪ್ರಧಾನ ಕಾರ್ಯದರ್ಶಿಯಾಗಿ ನಂಜನಗೂಡು ಪ್ರವೀಣ್, ಖಜಾಂಚಿಯಾಗಿ ಮೈಸೂರು ತಾಲೂಕಿನ ಗಣೇಶ್, ತಾಲೂಕು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ತಿ.ನರಸೀಪುರ ಮಹೇಶ್ ಕುಮಾರ್, ನಂಜನಗೂಡು ತಾಲೂಕಿನ ನಿರ್ದೇಶಕರಾಗಿ ಚಂದ್ರಶೇಖರ್ ಆಯ್ಕೆಯಾದರು.
ತಾಲೂಕು ಸಂಘಕ್ಕೆ: ಮೈಸೂರು ತಾಲೂಕು ನಿರ್ದೇಶಕರಾಗಿ ತಿಲಕ್, ಎಚ್.ಡಿ. ಕೋಟೆ-ಜಯಪ್ರಕಾಶ್, ಸರಗೂರು-ಮಹೇಶ್, ಕೆ.ಆರ್. ನಗರ ಹಾಗೂ ಸಾಲಿಗ್ರಾಮಕ್ಕೆ ಇಂದ್ರೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ.ಜಾತಿ ಮತ್ತು ಪಂಗಡಗಳ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್, ನಾರಾಯಣ್ ಹಾಗೂ ರಾಜ್ಯ ನಿರ್ದೇಶಕ ಬಸವರಾಜೇಗೌಡ ಹಾಗೂ ಮಹದೇವ ನಾಯಕ ಮತ್ತು ಮಾಜಿ ಜಿಲ್ಲಾಧ್ಯಕ್ಷ ನಾಗೇಂದ್ರ ಇತರರು ಇದ್ದರು.