ದಲಿತ ಹೋರಾಟ ರೈತ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಕೊಳ್ಳೇಗಾಲದ ಕೃಷಿ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ದಲಿತ ಹೋರಾಟ ರೈತ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸೋಮಣ್ಣ, ಗುರುಸ್ವಾಮಿ, ಡಾ.ಶಿವಕುಮಾರ್, ಶಿವಬಸವಣ್ಣ, ಮಾದು,ಕೆಂಪರಾಜು, ಬಸವರಾಜು ಇದ್ದರು.
ಕೊಳ್ಳೇಗಾಲದ ಕೃಷಿ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ದಲಿತ ಹೋರಾಟ ರೈತ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸೋಮಣ್ಣ, ಗುರುಸ್ವಾಮಿ, ಡಾ.ಶಿವಕುಮಾರ್, ಶಿವಬಸವಣ್ಣ, ಮಾದು,ಕೆಂಪರಾಜು, ಬಸವರಾಜು ಇದ್ದರು.
Published on

ಕೊಳ್ಳೇಗಾಲ: ತಾಲೂಕು ದಲಿತ ಹೋರಾಟ ರೈತ ಸಂಘವನ್ನು ನೂತನವಾಗಿ ಅಸ್ತಿತ್ವಕ್ಕೆ ತರುವುದರ ಜತೆಗೆ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು.

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಮಲ್ಲರಾಜು, ಕಾರ್ಯದರ್ಶಿಯಾಗಿ ಮುರಳೀಧರನ್, ಗೌರವಾಧ್ಯಕ್ಷರಾಗಿ ಮುದ್ದುರಾಜು, ಉಪಾಧ್ಯಕ್ಷರಾಗಿ ಅಣಗಳ್ಳಿ ಆನಂದ್, ಮುತ್ತುರಾಜ್, ಖಜಾಂಚಿ ಮಹದೇವ, ಸಹ ಕಾರ್ಯದರ್ಶಿ ಶಿವಣ್ಣ, ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಅವರನ್ನು ನೇಮಕ ಮಾಡಲಾಯಿತು.

ಹಿರಿಯ ರೈತ ಮುಖಂಡ ಅಣಗಳ್ಳಿ ಬಸವರಾಜು ಮಾತನಾಡಿ, ತಾಲೂಕಿನಲ್ಲಿ ದಲಿತ ರೈತ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈಗಾಗಲೇ ಸಂಘದಲ್ಲಿ ನೂರಕ್ಕೂ ಹೆಚ್ಚು ರೈತರಿದ್ದು, ಎಲ್ಲ ತಾಲೂಕಿನಲ್ಲೂ ದಲಿತ ರೈತ ಸಂಘಟನೆ ಮಾಡುವ ಅಭಿಲಾಷೆ ಇದೆ ಎಂದರು.

ನಮ್ಮ ಜನಾಂಗದವರಿಗೆ ಸಮಸ್ಯೆಗಳು ಎದುರಾದಾಗ ಹೋರಾಟ ನಡೆಸಿ ನ್ಯಾಯ ಕೊಡಿಸುವ ಮೂಲಕ ಸಂಘಟನೆ ಬಲಗೊ ಳಿಸಬೇಕು. ಜತೆಗೆ ಸಂಘದ ಸದಸ್ಯತ್ವ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ರೈತ ಸಂಘದ ಚಂದಕವಾಡಿ ಹೋಬಳಿ ಅಧ್ಯಕ್ಷ ಸೋಮಣ್ಣ, ನಿರ್ದೇಶಕ ಗುರುಸ್ವಾಮಿ, ಡಾ.ಶಿವಕುಮಾರ್, ಶಿವಬ ಸವಣ್ಣ, ಮಾದು, ಮುಖಂಡರಾದ ಸಿದ್ದಯ್ಯನಪುರ ಕೆಂಪರಾಜು, ಬಸವರಾಜು, ದಾಸನಪುರ ಶಿವಕುಮಾರ್, ಅಣ್ಣಪ್ಪಸ್ವಾಮಿ, ಸೋಮಣ್ಣ, ಕಾಮಗೆರೆ ಶಿವಕುಮಾರ್, ಕೆಂಪನಪಾಳ್ಯ ಶಿವಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net