ಯಲಬುರ್ಗಾ: ಕಟ್ಟಡ ಕಾರ್ಮಿಕರ ಸಂಘಕ್ಕೆ ತಾಲೂಕು ಪದಾಧಿಕಾರಿಗಳ ಆಯ್ಕೆ ಮಂಗಳವಾರ ನಡೆಯಿತು. ಅಧ್ಯಕ್ಷರಾಗಿ ಪ್ರಕಾಶ್ ಉಂಗ್ರಾಣಿ, ಉಪಾಧ್ಯಕ್ಷರನ್ನಾಗಿ ಹೊನ್ನೂರ್ ಸಾಬ್ ವಟಪರವಿ, ಕಾರ್ಯದರ್ಶಿಯಾಗಿ ಎಂಡಿ ಹುಸೇನ್ ಪಾಷಾ ಕಂಚಗಾರ್, ಸಂಘಟನಾ ಕಾರ್ಯದರ್ಶಿ ಧರ್ಮಣ್ಣ, ಸಹಕಾರ್ಯದರ್ಶಿಯಾಗಿ ಮುತ್ತಪ್ಪ ಕುದರಿಕೋಟಗಿ, ಸಂಘಟನಾ ಉಸ್ತುವಾರಿ ಕಾರ್ಯದರ್ಶಿಯಾಗಿ, ಡಿಕೆ ರವಿ ಚಂದ್ರ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಮಲ್ಲಪ್ಪ ಸುರಕೋಡ ಆಯ್ಕೆಯಾಗಿದ್ದಾರೆ.