

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ನಿವೃತ್ತರ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ 2024ರಿಂದ 2027ರ ಅವಧಿಗೆ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆ ಆಗಿರುವ 23 ಜನ ಕಾರ್ಯಕಾರಿ ಸಮಿತಿ ಸದಸ್ಯರ ಪೈಕಿ 9 ಜನ ಪದಾಧಿಕಾರಿಗಳನ್ನು ಆಡಳಿತ ಮಂಡಳಿಗೆ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ನೂತನ ಆಡಳಿತ ಮಂಡಳಿಗೆ ಗೌರವ ಅಧ್ಯಕ್ಷರಾಗಿ ವಿ.ಬಿ. ಮತ್ತೂರ, ಅಧ್ಯಕ್ಷರಾಗಿ ಬಿ.ಎಂ. ಸೂರಗೊಂಡ, ಉಪಾಧ್ಯಕ್ಷರಾಗಿ ಎಂ.ಡಿ. ಸೊನೆಗೋಜಿ ಮತ್ತು ಡಾ. ಡಿ.ಕೆ. ಕನಕಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಜಿ.ಸುಬ್ಬಾಪುರಮಠ, ಕೋಶಾಧ್ಯಕ್ಷರಾಗಿ ರಾಮಣ್ಣ ಗಡ್ಡದ, ಸಹ ಕಾರ್ಯದರ್ಶಿಯಾಗಿ ಎಸ್.ಜಿ. ಚಿಕ್ಕೂರಮಠ ಮತ್ತು ಶ್ರೀಕಾಂತ ಯಲಿಗಾರ, ಸಂಘಟನಾ ಕಾರ್ಯದರ್ಶಿಯಾಗಿ ಎನ್. ಧನಲಕ್ಷ್ಮೀ ಆಗಿದ್ದಾರೆ.
ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಬಿ. ಪರಪ್ಪಗೌಡರ, ಎಸ್.ಎಸ್. ಕಣವಿ, ಎನ್.ಆರ್. ಬಾಳಿಕಾಯಿ, ಲೀಲಾವತಿ ಕಳಸಪ್ಪನವರ, ಶಿವಾನಂದ ಶಿವಳ್ಳಿ, ಎಚ್.ಎಸ್. ಗಡ್ಡಿ, ಎನ್.ಎನ್ ಕಳಸನ್ನವರ, ಎಸ್.ಡಿ. ಹೊಸಮನಿ, ಎಂ.ಬಿ. ಕಣಗಿನಹಾಳ, ಕೆ.ಪಿ. ಕಟ್ಟಿಮನಿ, ಎಸ್.ಬಿ. ಕೇಸರಿ, ಡಿ.ಆರ್. ಸನ್ನುಬಾಯಿ, ಎಸ್.ವಿ. ನಾಯ್ಕ, ಮುನಿಶ್ವರ ಶಾಸ್ತ್ರೀ ಬಡಿಗೇರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.