

ಬ್ರಹ್ಮಾವರ: ಕರ್ನಾಟಕ ರಾಜ್ಯ ಕನ್ನಡ ಜಾನಪದ ಪರಿಷತ್ ಅಧಿನದ ಉಡುಪಿ ಜಿಲ್ಲಾ ಘಟಕಕ್ಕೆ ಪೂರಕವಾಗಿ ಬ್ರಹ್ಮಾವರ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಶನಿವಾರ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜು ವಠಾರದಲ್ಲಿ ಜರುಗಿತು. ಬ್ರಹ್ಮಾವರ ನಿವೃತ್ತ ಪ್ರೌಢಶಾಲಾ ಮುಖ್ಯಶಿಕ್ಷಕ ತಿಮ್ಮ ನಾಯ್ಕ ಅಧ್ಯಕ್ಷರಾಗಿ ಆಯ್ಕೆಗೊಂಡರು.
ತಿಮ್ಮ ನಾಯ್ಕ ಮಾತನಾಡಿ, ಬ್ರಹ್ಮಾವರ ತಾಲೂಕು ಮಟ್ಟದ ಕನ್ನಡ ಜಾನಪದ ಮನಸ್ಸುಗಳ ಒಗ್ಗೂಡುವಿಕೆಗೆ, ಜಾನಪದ ಕಲೆಗಳ ಮತ್ತು ನಾಡು ನುಡಿಯೊಂದಿಗೆ ಜಾನಪದ ಕಲಾವಿದರನ್ನು ಬೆಳೆಸುವ ಮತ್ತು ಉಳಿಸುವ ಪ್ರೋತ್ಸಾಹಿಸುವುದಕ್ಕಾಗಿ ಶ್ರಮಿಸಿ ಕನ್ನಡ ಜಾನಪದ ಪರಿಷತ್ ತಾಲೂಕಾದ್ಯಂತ ಇರುವ ಜನರನ್ನು ಸಂಘಟಿಸಿ ಇಲ್ಲಿನ ಎಲ್ಲ ಜನಪದರನ್ನು ಒಗ್ಗೂಡಿಸುವ ಎಂದರು. ಆ.12ರಂದು ಸಂಜೆ 5 ಗಂಟೆಗೆ ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳಿಂದ ಬ್ರಹ್ಮಾವರ ಘಟಕದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.