

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾಥಿರ್ಗಳ ಸಂದ 2024&25ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು ಎಂದು ಸಂದ ಗೌರವ ಅಧ್ಯಕ್ಷ ಡಾ. ಮಂಜುನಾಥ ಹೊಂಗಲದ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂದ ಅಧ್ಯಕ್ಷರಾಗಿ ನಾಗರಾಜ ಚಲವಾದಿ, ಉಪಾಧ್ಯಕ್ಷರಾಗಿ ರೋಹಿತ ನಾಯಕ, ಸಚಿನ ಕುರಾಡೆ, ಪ್ರಧಾನ ಕಾರ್ಯದಶಿರ್ಯಾಗಿ ಮಲ್ಲಿಕಾರ್ಜುನ ಪರಮ್ಮನವರ, ಕಾರ್ಯಾಧ್ಯಕ್ಷರಾಗಿ ಬಸವರಾಜ ಹೆಮ್ಮಡಗಿ, ರಾಜು ಚವ್ಹಾಣ, ಮಹಿಳಾ ಪ್ರತಿನಿಧಿಯಾಗಿ ರಾಜೇಶ್ವರಿ ತೊಂಡಿಹಾಳ, ಸಂಟನಾ ಕಾರ್ಯದಶಿರ್ಯಾಗಿ ಹುಸೇನಸಾಬ ವಣಗೇರಿ, ಸಹ ಸಂಟನಾ ಕಾರ್ಯದಶಿರ್ಯಾಗಿ ಅನಂತ ಪೂಜಾರ, ಖಜಾಂಚಿಯಾಗಿ ನರಸಿಂಗ್ ದೇವಿ ಹಾಗೂ ಕಾನೂನು ಸಲಹೆಗಾರರಾಗಿ ಹಿರಿಯ ವಕೀಲ ಅರುಣ ಜೋಶಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಅವುಗಳ ಪರಿಹಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಕುಲಪತಿ ಪರಿಹರಿಸಿಲ್ಲ. ಸಂಶೋಧನಾ ವಿದ್ಯಾಥಿರ್ ವೇತನ ಹೆಚ್ಚಳ, ಎಲ್ಲ ವರ್ಗದ ವಿದ್ಯಾಥಿರ್ಗಳಿಗೆ ಲ್ಯಾಪ್ಟಾಪ್ ವಿತರಣೆ, ಮಹಿಳೆಯರ ಭದ್ರತೆ ಮತ್ತು ಇತರ ಉದ್ದೇಶಕ್ಕೆ ವಿವಿ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಹೊಸ ಕಟ್ಟಡ ನಿರ್ಮಾಣ ಸೇರಿ ಇತರ ವಿಷಯಗಳ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದರು.
ಸರ್ಕಾರದಿಂದ ಬರಬೇಕಿರುವ ಅನುದಾನ, ವಿದ್ಯಾಥಿರ್ಗಳ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪರಿಷತ್ ಸದಸ್ಯರು ಹಾಗೂ ವಿದ್ಯಾಥಿರ್ಗಳನ್ನೂ ಒಳಗೊಂಡು ಕುಲಪತಿ ಜತೆಗೆ ಸಮಗ್ರ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಬೇಕು. ಈ ಕಾರ್ಯ ಒಂದು ತಿಂಗಳಲ್ಲಿ ನಡೆಯಬೇಕು. ಇಲ್ಲವಾದಲ್ಲಿ ಬೀದಿಗೆ ಇಳಿದು ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ನಾಗರಾಜ ಚಲವಾದಿ, ಮಲ್ಲಿಕಾರ್ಜುನ ಪರಮ್ಮನವರ, ರಾಜೇಶ್ವರಿ ತೊಂಡಿಹಾಳ, ಶರಣುಗೌಡರ, ಇತರರು ಇದ್ದರು.