

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ರಾಜ್ಯ ಪಶು ವೈದ್ಯಕಿಯ ಪರೀಕ್ಷಕರ ಸಂಘ ಜಿಲ್ಲಾ ಘಟಕಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಅಧ್ಯಕ್ಷರಾಗಿ ಕಲಘಟಗಿಯ ಎಂ.ಎಸ್. ಘಂಟೆ, ಉಪಾಧ್ಯಕ್ಷರಾಗಿ ಹುಬ್ಬಳ್ಳಿಯ ನಾಗೇಶ ಜಮ್ಮಿಹಾಳ, ಪ್ರಧಾನ ಕಾರ್ಯದರ್ಶಿಯಾಗಿ ಧಾರವಾಡದ ಮಾರ್ತಾಂಡಪ್ಪ ಕತ್ತಿ, ಜಂಟಿ ಕಾರ್ಯದಶಿರ್ಯಾಗಿ ನವಲಗುಂದದ ಪ್ರಕಾಶ ಬಡಿಗೇರ, ಖಜಾಂಚಿಯಾಗಿ ಧಾರವಾಡದ ಶ್ರೀಶೈಲ ಚಿಕನಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಹುಬ್ಬಳ್ಳಿಯ ಎಸ್.ವಿ. ಪಾಟೀಲ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಧಾರವಾಡದ ಎಂ.ಕೆ.ಚವ್ಹಾಣ ಅವರನ್ನು ನಾಮನಿರ್ದೇಶನ ಮಾಡಿ ಆಯ್ಕೆಮಾಡಲಾಯಿತು ಎಂದು ಚುನಾವಣಾಧಿಕಾರಿ ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಮಹಾಗಾಂವ ತಿಳಿಸಿದ್ದಾರೆ.
ಹಿಂದಿನ ಅಧ್ಯಕ್ಷ ಪಾರ್ಶ್ವನಾಥ ಹೊಸಮನಿ, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ಎಸ್.ಎಂ. ಕರಬಣ್ಣವರ್, ಬೆಳಗಾವಿ ವಿಭಾಗೀಯ ಉಪಾಧ್ಯಕ್ಷ ಗಿರೀಶ ಕುಲಕರ್ಣಿ, ಬೆಳಗಾವಿ ವಿಭಾಗೀಯ ಜಂಟಿ ಕಾರ್ಯದರ್ಶಿ ವೈ.ಸಿ.ಮೇಲಿನಮನಿ, ತಾಲೂಕಿನ ಪದಾಧಿಕಾರಿಗಳು, ಇತರರು ಇದ್ದರು.