ಪಾಲಿಕೆ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ

17 Dwd 9 - Copy
Published on

ಧಾರವಾಡ: ಹು-ಧಾ ಮಹಾನಗರ ಪಾಲಿಕೆಯ ೨೨ನೇ ಅವಽಗೆ ೪ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ಚುನಾವಣೆ ಇಲ್ಲಿನ ಪಾಲಿಕೆ ಕಚೇರಿಯಲ್ಲಿ ಗುರುವಾರ ನಡೆಯಿತು. ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಅಧ್ಯಕ್ಷತೆಯಲ್ಲಿ ನಡೆದ À್ರಕ್ರಿಯೆಯಲ್ಲಿ ಎಲ್ಲ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆಯಿತು.
ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿಗೆ ಅನಿತಾ ಚಳಗೇರಿ, ಶೀಲಾ ಕಾಟಕರ, ಮಂಜುನಾಥ ಬಟ್ಟೆಣ್ಣವರ, ಬಿಲಕಿಸಬಾನು ಮುಲ್ಲಾ, ಮಹಮ್ಮದ್‌ಇಕ್ಬಾಲ್ ನವಲೂರ, ಮಲ್ಲಿಕಾರ್ಜುನ ಗುಂಡೂರ ಆಯ್ಕೆಯಾದರು.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ನಿತಿನ್ ಇಂಡಿ, ಮಂಗಳಮ್ಮ ಹಿರೇಮನಿ, ಕವಿತಾ ಕಬ್ಬೇರ, ಮನಸೂರಾ ಮುಸ್ತಾಕ್‌ಅಹ್ಮದ್ ಮುದಗಲ್, ಸುನಿತಾ ಮಾಳವದಕರ, ಮಹಾದೇವಪ್ಪ ನರಗುಂದ, ಶಿವಾನಂದ ಮೆಣಸಿನಕಾಯಿ ಆಯ್ಕೆಯಾದರು.
ನಗರ ಯೋಜನೆ ಮತ್ತು ನಗರ ಅಭಿವೃದ್ಧಿ ಸ್ಥಾಯಿ ಸಮಿತಿಗೆ ಪ್ರೀತಿ ಖೋಡೆ, ಅಕ್ಷತಾ ಅಸುಂಡಿ, ದೀಪಾ ನೀರಲಕಟ್ಟಿ, ಮಹಮ್ಮದ್ ಇಸ್ಮಾಯಿಲ್ ಭದ್ರಾಪುರ, ಬೀರಪ್ಪ ಖಂಡೇಕಾರ, ರಾಧಾಬಾಯಿ ಸಫಾರೆ, ಜ್ಯೋತಿ ಪಾಟೀಲ ಆಯ್ಕೆಯಾದರು.
ಲೆಕ್ಕಗಳ ಸ್ಥಾಯಿ ಸಮಿತಿಗೆ ಸುಮಿತ್ರಾ ಗುಂಜಾಳ, ವಿಷ್ಣುತೀರ್ಥ ಕೊರ್ಲಹಳ್ಳಿ, ಸೀಮಾ ಮೊಗಲಿಶೆಟ್ಟರ್, ಸೂರವ್ವ ಪಾಟೀಲ, ಶಿವಗಂಗಾ ಮಾನಶೆಟ್ಟರ್, ಮಂಜುನಾಥ ಬಡಕುರಿ ಆಯ್ಕೆಯಾಗಿದ್ದಾರೆ.
ರತ್ನಾಬಾಯಿ ನಾಝರೆ ಅವರ ನಾಮಪತ್ರ ಕ್ರಮಬದ್ಧವಾಗಿರದ ಕಾರಣ ತಿರಸ್ಕೃತಗೊಂಡಿದೆ. ಬಾಕಿ ಸದಸ್ಯರ ಸ್ಥಾನಕ್ಕೆ ಅಽಸೂಚನೆ ಹೊರಡಿಸಿ ಚುನಾವಣೆ ಜರುಗಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net