ಅಧ್ಯಕ್ಷರಾಗಿ ಕಾಂತರಾಜು ಅವಿರೋಧ ಆಯ್ಕೆ

01 Hg Photo
ಮಾದೀಹಳ್ಳಿ ಹೊಬಳಿ ಹಗರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎಚ್.ಎಂ.ಕಾಂತರಾಜು, ಉಪಾಧ್ಯಕ್ಷರಾಗಿ ಗೋವಿಂದನಾಯ್ಕ ಅವಿರೋಧವಾಗಿ ಆಯ್ಕೆಯಾದರು.
Published on

ಹಗರೆ: ಮಾದೀಹಳ್ಳಿ ಹೋಬಳಿ ಹಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಎಂ.ಕಾಂತರಾಜು, ಉಪಾಧ್ಯಕ್ಷರಾಗಿ ಗೋವಿಂದನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 13 ಸದಸ್ಯರನ್ನೊಳಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎಚ್.ಎಂ.ಕಾಂತರಾಜು, ಉಪಾಧ್ಯಕ್ಷ ಸ್ಥಾನಕ್ಕೆ ಗೋವಿಂದನಾಯ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ವಾಸಿಂ ಅವರು ಅಧ್ಯಕ್ಷರಾಗಿ ಎಚ್.ಎಂ.ಕಾಂತರಾಜು, ಉಪಾಧ್ಯಕ್ಷರಾಗಿ ಗೋವಿಂದನಾಯ್ಕ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮಲ್ಲಿಕಾರ್ಜುನ, ಸಹಾಯಕ ರಘು, ಅಮೃತ ವರ್ಶಿಣಿ ಹಾಜರಿದ್ದರು. ಮಾಜಿ ಅಧ್ಯಕ್ಷ ಎಂ.ಆರ್.ಕುಮಾರ್, ಸದಸ್ಯರಾದ ದಿಲೀಪ್ ಕುಮಾರ್, ಶಿವರಾಜು, ಮಲ್ಲೇಶ್, ಗೌರಮ್ಮ ಶಂಕರ್, ಮಲ್ಲಿಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net