ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ಉಪಾಧ್ಯಕ್ಷರಾಗಿ ಶಶಿಧರ್ ಅವಿರೋಧ ಆಯ್ಕೆ

2
Published on

ಮಂಡ್ಯ: ಇಲ್ಲಿನ ಅಶೋಕ ನಗರದಲ್ಲಿರುವ ಸಹಕಾರ ರಜತ ಭವನದಲ್ಲಿ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಆಡಳಿತ ಮಂಡಳಿಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಶಶಿಧರ್ ಸಂಗಾಪುರ ಅವಿರೋಧವಾಗಿ ಆಯ್ಕೆಯಾದರು.

ಆಡಳಿತ ಮಂಡಳಿಯಲ್ಲಿ ಒಟ್ಟು 16 ಜನ ನಿರ್ದೇಶಕರಿದ್ದು, ತೆರವಾಗಿದ್ದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಶಶಿಧರ್ ಸಂಗಾಪುರ ಅವರು ಅವಿರೋಧ ಆಯ್ಕೆಯಾದರು. ಬಳಿಕ ಮಾತನಾಡಿದ ಅವರು, ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಎಲ್ಲ ನಿರ್ದೇಶಕರ ಸಹಕಾರ ದೊಂದಿಗೆ ಸಂಘವನ್ನು ಅಭಿವೃದ್ಧಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ಭರವಸೆ ನಮ್ಮಲ್ಲಿದೆ ಎಂದರು. ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಸುಧಾಕರ್ ಕರ್ತವ್ಯ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷ ಬಿ.ಡಿ ಪುರುಷೋತ್ತಮ್, ನಿರ್ದೇಶಕರಾದ ಎಸ್.ನಾಗೇಂದ್ರ, ಬೇಲೂರು ಸೋಮಶೇಖರ್, ಎ.ಎಚ್.ರಮೇಶ್, ಕೆ.ಎಂ ಗುರುಸ್ವಾಮಿ, ಸಿ.ದೇವರಾಜು, ಸುಗ್ಗಿ ಕೆಂಚಪ್ಪ, ಎನ್.ದಾಸೇಗೌಡ, ಬಿ.ಚೌಡಯ್ಯ, ಕೊಂಡಯ್ಯ ಇತರರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net