ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

ಸಿರಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಸ್ಥಾನಕ್ಕೆ ಆಯೋಜಿಸಿದ್ದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಸಂಭ್ರಮಿಸಿದರು.
ಸಿರಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಸ್ಥಾನಕ್ಕೆ ಆಯೋಜಿಸಿದ್ದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಸಂಭ್ರಮಿಸಿದರು.
Published on

ಸಿರಿಗೇರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಸಾಲಗಾರರ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಡಿ.ಚನ್ನಪ್ಪ, ಬಿ.ಸೋಮಶೇಖರಪ್ಪ, ಎಸ್.ಎಂ.ನಾಗರಾಜ ಸ್ವಾಮಿ, ಸುಗ್ನಳ್ಳಿ ರುದ್ರಪ್ಪ, ಬಿ.ವೀರೇಶ, ಹಿಂದುಳಿದ ವರ್ಗದಿಂದ (ಎ) ಗರ್ಜಲಿಂಗಪ್ಪ, ಹಿಂದುಳಿದ ವರ್ಗದಿಂದ (ಬಿ) ಹಾಗಲೂರು ಮಲ್ಲನಗೌಡ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಭಜಂತ್ರಿ ರಮೇಶ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಬಿ.ಮಲ್ಲಯ್ಯ ನಾಯಕ್, ಮಹಿಳಾ ಮೀಸಲು ಕ್ಷೇತ್ರದಿಂದ ಜಿ.ಗೌರಮ್ಮ, ಐ.ಜಲಜಾಕ್ಷಮ್ಮ, ಸಾಲಗಾರ ಅಲ್ಲದ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಕೆ.ಶಿವಪ್ಪ ಗೆಲವು ಸಾಧಿಸಿದ್ದಾರೆ.

ಸಂಘದಲ್ಲಿ 568 ಸಾಲಗಾರರ ಕ್ಷೇತ್ರದ ಸದಸ್ಯರಿದ್ದು, 525 ಮತ ಚಲಾವಣೆಯಾಗಿವೆ. 173 ಸಾಲಗಾರ ಅಲ್ಲದ ಕ್ಷೇತ್ರದ ಸದಸ್ಯರಿದ್ದು, 164 ಮತ ಚಲಾವಣೆಯಾಗಿವೆ. ಶೇ.98 ಮತಚಲಾವಣೆ ನಡೆದಿದೆ ಎಂದು ಚುನಾವಣೆ ಅಧಿಕಾರಿ ಜಿ.ಎಸ್.ಸುರೇಂದ್ರ ತಿಳಿಸಿದ್ದಾರೆ.

ಅಸಿಸ್ಟೆಂಟ್ ರಿಟೇನಿಂಗ್ ಅಧಿಕಾರಿ ವಿ.ವೆಂಕಟೇಶ, ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಬಾಲಪ್ಪ, ಸೊಸೈಟಿ ಸಿಬ್ಬಂದಿ ಆರ್.ಸುರೇಶ, ಹೊನ್ನೂರ ಸ್ವಾಮಿ, ರಂಜಾನ್ ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net