ಪಾಳ್ಯ ಕೃಷಿ ಪತ್ತಿನ ಸಂಘಕ್ಕೆ ನಿರ್ದೇಶಕರ ಆಯ್ಕೆ

1
ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ 12 ಜನರು ನಿರ್ದೇಶಕರನ್ನು ಜೆಡಿಎಸ್ ತಾಲೂಕು ಅಧ್ಯಕ್ಷ ಕೆ .ಎಸ್. ಮಂಜೇಗೌಡ ಹಾಗೂ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ನಳ್ಳಿ ಜಗದೀಶ್ ಅಭಿನಂದಿಸಿದರು.
Published on

ಆಲೂರು: ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 12 ಜನರು ನಿರ್ದೇಶಕರಾಗಿ ಆಯ್ಕೆಯಾದರು.

ತಾಲೂಕಿನ ಪಾಳ್ಯ ಗ್ರಾಮದಲ್ಲಿರುವ ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12 ನಿರ್ದೇಶಕರ ಬಲ ಹೊಂದಿದ್ದು, ಆಡಳಿತ ಮಂಡಳಿಯ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ, 44 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಹಾಗೂ ಹಾಸನ ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಅವರ ಬಣದ 4 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರೆ ಉಳಿದ 8 ನಿರ್ದೇಶಕರು ಚುನಾವಣೆ ಮೂಲಕ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಕುಮಾರ್ ಕಾರ್ಯನಿರ್ವಹಿಸಿದರು.

ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಪಿ.ಎಲ್.ಲಿಂಗರಾಜು, ಎ.ಆರ್‌ಕಲ್ಯಾಣ ಕುಮಾರ್, ರಘುಪಾಳ್ಯ(ಕರವೇ), ಕೆ.ಎನ್.ನಾಗರಾಜ್ ಕಟ್ಟೆಗದ್ದೆ, ಎಂ.ಡಿದೇವರಾಜ್, ಮಹಿಳಾ ಕ್ಷೇತ್ರದಿಂದ ಪ್ರೇಮಲತಾ, ಧ್ವ್ವನಿಕಾ, ಹಿಂದುಳಿದ ವರ್ಗ ‘ಎ’ ನಿಂದ ನಿಂಗರಾಜು, ಹಿಂದುಳಿದ ವರ್ಗ ‘ಬಿ’ ನಿಂದ ಪ್ರಕಾಶ್ ಶಿಂಗೋಡನಹಳ್ಳಿ, ಪರಿಶಿಷ್ಟ ಜಾತಿಯಿಂದ ವೆಂಕಟೇಶ್ ಹಾಗೂ ಪರಿಶಿಷ್ಟ ಪಂಗಡದಿಂದ ಚಿನ್ನ ನಾಯಕ, ಸಾಲಗಾರರಲ್ಲದ ಕ್ಷೇತ್ರದಿಂದ ಲಿಂಗರಾಜೇಗೌಡ ಆಯ್ಕೆಯಾದರು. ಸೊಸೈಟಿ ಆವರಣದಲ್ಲಿ ಅಭಿನಂದಿಸಲಾಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಕೆಎಸ್ ಮಂಜೇಗೌಡ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ತಾಪಂ ಮಾಜಿ ಸದಸ್ಯ ಸಿ.ವಿ.ಲಿಂಗರಾಜು, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಎಸ್.ನಟರಾಜ್, ಹಾಸನ ಸಹಕಾರ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ಮಾಜಿ ಗ್ರಾಪಂ ಅಧ್ಯಕ್ಷೆ ಭವ್ಯಾ ಪುರುಷೋತ್ತಮ್, ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಡಿ ಮೋಹನ್‌ಕುಮಾರ್ ಹಾಗೂ ಸಿಬ್ಬಂದಿ ಮತ್ತು ಪಾಳ್ಯ ಸೊಸೈಟಿಯ ಮಾಜಿ ಅಧ್ಯಕ್ಷರು, ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net