ಕಸಬಾ ಕೃಷಿ ಪತ್ತಿನ ಸಂಘಕ್ಕೆ ನಿರ್ದೇಶಕರ ಆಯ್ಕೆ

ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಸನ್ಮಾನಿಸಿದರು.
ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಸನ್ಮಾನಿಸಿದರು.
Published on

ಆಲೂರು: ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಭಾನುವಾರ ಹೊರಬಿದ್ದಿದೆ.

ಪಟ್ಟಣದಲ್ಲಿ ಟಿಎಪಿಸಿಎಂಎಸ್ ಭವನದಲ್ಲಿ ಭಾನುವಾರ ಚುನಾವಣೆ ನಡೆಯಿತು. ಒಟ್ಟು 11 ನಿರ್ದೇಶಕ ಸ್ಥಾನಗಳ ಪೈಕಿ 4 ಸ್ಥಾನಗಳು ಸ್ಥಳೀಯ ಮುಖಂಡರ ಸಮಕ್ಷಮದಲ್ಲಿ ಚರ್ಚೆಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಎಚ್.ಪಿ.ದಿನೇಶ್, ಜಯಪಾಲ್, ತೌಫಿಕ್ ಅಹಮದ್, ಶಿವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದರು.

ಒಟ್ಟು 7 ಸ್ಥಾನಕ್ಕೆ 11ಅಭ್ಯರ್ಥಿಗಳು ಕಣದಲ್ಲಿದ್ದರು. ಎರಡು ಮಹಿಳಾ ಕ್ಷೇತ್ರದಿಂದ ರೇಖಾ ಸಂದೇಶ್, ಶಾಂತಮ್ಮ, ರೇಣುಕಾ ಸ್ಪರ್ಧಿಸಿದ್ದರು. ಅಂತೆಯೇ ಐದು ಸಾಮಾನ್ಯ ಕ್ಷೇತ್ರದಿಂದ ಎಚ್.ಎಂ. ಜಗದೀಶ್, ಜಯಣ್ಣ, ಎಂ.ಎಸ್.ದಿನೇಶ್, ಡಿ.ಜೆ.ನವೀನ್, ಮಲ್ಲೇಶ್, ಮೋಹನ್‌ಕುಮಾರ್, ರೇಖಾ, ರೇಣುಕಾ, ಶಾಂತಕೃಷ್ಣ, ಶಾಂತಮ್ಮ, ಎಂ.ಎಸ್.ಸೋಮಶೇಖರ್ ಸ್ಪರ್ಧಾ ಕಣದಲ್ಲಿದ್ದರು. ಮಹಿಳಾ ಕ್ಷೇತ್ರದಿಂದ ರೇಖಾ ಸಂದೇಶ್ 315 ಮತ ಹಾಗೂ ಶಾಂತಮ್ಮ 304 ಮತ ಪಡೆದು ಜಯ ಗಳಿಸಿದರೆ ರೇಣುಕಾ 197 ಮತ ಪಡೆದು ಪರಾಭವಗೊಂಡರು. ಐದು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಗದೀಶ್ 422, ಶಾಂತಕೃಷ್ಣ 416, ದಿನೇಶ್ 327, ಸೋಮಶೇಖರ್ 319, ಮಲ್ಲೇಶ್ 313 ಮತ ಪಡೆದು ಜಯ ಗಳಿಸಿದರೆ, ಡಿ.ಜೆ ನವೀನ್ 248, ಮೋಹನ್‌ಕುಮಾರ್ 212, ಜಯಣ್ಣ 253 ಮತ ಪಡೆದು ಸೊಲುಂಡರು.

ಫಲಿತಾಂಶವನ್ನು ಚುನಾವಣಾಧಿಕಾರಿ ಘೋಷಿಸಿದರು. ಎಚ್‌ಡಿಸಿಸಿ ಬ್ಯಾಂಕ್‌ನ ಜಿಲ್ಲಾ ನಿರ್ದೇಶಕ ಕಬ್ಬಿನಲ್ಲಿ ಜಗದೀಶ್ ನಿರ್ದೇಶಕರನ್ನು ಅಭಿನಂದಿಸಿದರು. ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸಿ.ವಿ.ಲಿಂಗರಾಜು, ಪಿ.ಎಲ್. ನಿಂಗರಾಜು, ತಾಳೂರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಲಯನ್ಸ್ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಪ್ರವೀಣ್, ದಲಿತ ಮುಖಂಡ ಧರ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net