ಲ್ಯಾಂಪ್ಸ್ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

D.8-MDG-2P1
ಮೂಡಿಗೆರೆಯ ಲ್ಯಾಂಪ್ಸ್ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಳನ್ನು ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು.
Published on

ಮೂಡಿಗೆರೆ: ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕರ ಹುದ್ದೆಯ 12 ಸ್ಥಾನಗಳಿಗೆ ಆದಿವಾಸಿ ರಕ್ಷಣಾ ಪರಿಷತ್‌ನ ರಾಜ್ಯ ಜಂಟಿ ಕಾರ್ಯದರ್ಶಿ ಶ್ರೀನಿವಾಸ್ ತಂಡದ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಮೂಡಿಗೆರೆ ಕ್ಷೇತ್ರದಿಂದ ಚಂದ್ರೇಶ್, ಕೃಷ್ಣಾ, ಕೇಶವ, ವಿಜೇಂದ್ರ, ನಾಗೇಂದ್ರ, ರವೀಂದ್ರ, ಸೀನಾ, ಆಲ್ದೂರು ಕ್ಷೇತ್ರದಿಂದ ಶಂಕರ್, ರೇಖಾ, ಮಹೇಶ್, 3 ಮಹಿಳಾ ಮೀಸಲು ಕ್ಷೇತ್ರದಿಂದ ಪುಷ್ಪಾ, ಸವಿತಾ ಜಯಗಳಿಸಿದ್ದಾರೆ.
ಆದಿವಾಸಿ ರಕ್ಷಣಾ ಪರಿಷತ್‌ನ ರಾಜ್ಯ ಜಂಟಿ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಲ್ಯಾಂಪ್ಸ್ ಸಹಕಾರ ಸಂಘದ ಅಭಿವೃದ್ಧಿಗಾಗಿ ಮತದಾರರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಪ್ರಸ್ತುತ ಸಂಘದಲ್ಲಿ ದುಡಿಯಲು ಬಂಡವಾಳವಿಲ್ಲ. ಅದನ್ನು ಹೊಸದಾಗಿ ಪ್ರಾರಂಭಿಸಬೇಕಾಗಿದೆ. ಅರಣ್ಯ ಉತ್ಪನ್ನದ ಕಡೆ ಒತ್ತು ನೀಡಿ ಬಂಡವಾಳ ಅಧಿಕಗೊಳಿಸುವ ಮೂಲಕ ಸಮುದಾಯ ಹಾಗೂ ಸೊಸೈಟಿ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸಲು ಸಜ್ಜಾಗಿದ್ದಾರೆಂದು ಹೇಳಿದರು.
ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಎಸ್.ಜಯರಾಮ್, ಸಿ.ಬಿ.ಶಂಕರ್, ರಘು ಮಗ್ಗಲಮಕ್ಕಿ, ರವಿ ಕುನ್ನಳ್ಳಿ, ಅಹಮ್ಮದ್‌ಬಾವ, ಯಾಕೂಬ್, ಹರೀಶ್ ಹೊರಟಿ, ಸುಧೀರ್ ಚಕ್ರಮಣಿ, ಸುರೇಶ್ ಮತ್ತಿತರರಿದ್ದರು. ಸಂಘದ ಚುನಾವಣಾಧಿಕಾರಿ ಗುರುಮೂರ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net