ಹಳೆ ವಿದ್ಯಾರ್ಥಿ ಸಂಘದ ಸಭೆಯಲ್ಲಿ ನಿರ್ದೇಶಕರ ಆಯ್ಕೆ

fmcc college
Published on

ಮಡಿಕೇರಿ: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸಭೆ ಕಾಲೇಜಿನ ನ್ಯಾಕ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬೊಳ್ಳಜಿರ ಅಯ್ಯಪ್ಪ ವಹಿಸಿದ್ದರು. ಸಭೆಯಲ್ಲಿ ಎಫ್‌ಎಂಕೆಎಂಸಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನೂತನ ನಿರ್ದೇಶಕರಾಗಿ ಬಿ.ಜಿ.ಹರ್ಷಿತ್, ಕರವಂಡ ಸೀಮಾ ಗಣಪತಿ, ಐಚಂಡ ರಶ್ಮಿ ಮೇದಪ್ಪ, ಆದರ್ಶ್, ಕೇಲೇಟಿರ ದೇವಯ್ಯ, ವತ್ಸಲಾ, ಚೀಯಕಪೂವಂಡ ಸಚಿನ್ ಪೂವಯ್ಯ, ಕಿಶೋರ್ ರೈ ಕತ್ತಲೆಕಾಡು, ಜಯಂತಿ ಉದಿಯಂಡ, ಚರಣ್ ಬಲ್ಯದ, ತೆನ್ನೀರ ಟೀನಾ ಚಂಗಪ್ಪ, ಪೆಬ್ಬಟ್ಟಿರ ಶೀತಲ್ ಕಾರ್ಯಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವಿದ್ಯಾರ್ಥಿ ಸಂಘದ ಹಳೆಯ ಕಾರ್ಯಚಟುವಟಿಕೆಗಳನ್ನು ಪ್ರಸ್ತಾಪಿಸಲಾಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಅರಿವು, ಮೆಡಿಕಲ್ ಕ್ಯಾಂಪ್, ವೃತ್ತಿ ಮಾರ್ಗದರ್ಶಿ ಕಾರ್ಯಕ್ರಮ, ಗಾಂಜಾ ವ್ಯಸನ ಆರೋಗ್ಯಕ್ಕೆ ಮಾರಕ ಕಾರ್ಯಗಾರ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಹಾಗೂ ಇನ್ನು ಕೆಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಇ ಲರ್ನಿಂಗ್ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಉಪಯೋಗಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವರೂ ಸಹಮತ ವ್ಯಕ್ತಪಡಿಸಿ ಕಾರ್ಯರೂಪಕ್ಕೆ ತರುವಂತೆ ತೀರ್ಮಾನಿಸಲಾಯಿತು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಹೆಚ್ಚಿನ ಸದಸ್ಯರನ್ನು ಸಂಘಕ್ಕೆ ಸೇರ್ಪಡೆಗೊಳಿಸಿಕೊಳ್ಳುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಕೋಚನ ದಿಶಾಂತ್, ಜಗದೀಶ್, ಲತಾ ಚಂಗಪ್ಪ, ಯಶೋಧ, ಡಾ.ಪಾರ್ವತಿ ಅಪ್ಪಯ್ಯ, ನಿಖಿಲ್ ನಾಚಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net