

ಮುದ್ದೇಬಿಹಾಳ : ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ತಾಲೂಕು ಗುತ್ತಿಗೆದಾರರ ಸಂದ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಗೌರವಾಧ್ಯರಾಗಿ ಮುತ್ತಿನಶೆಟ್ಟಿ ಗೂಳಿ ಆಲೂರ, ಅಧ್ಯರಾಗಿ ಸುರೇಶಗೌಡ ಪಾಟೀಲ ಇಂಗಳಗೇರಿ, ಉಪಾಧ್ಯರಾಗಿ ಯಲ್ಲಪ್ಪ ಚಲವಾದಿ ಹಡಲಗೇರಿ, ತಾಪಂ ಮಾಜಿ ಸದಸ್ಯ ಹಣಮಂತ ಕುರಿ, ಪ್ರಧಾನ ಕಾರ್ಯದರ್ಶಿಯಾಗಿ ಬಹಾದ್ದೂರ ರಾಠೋಡ ಕೋಳೂರ ತಾಂಡಾ, ಕಾರ್ಯದರ್ಶಿಯಾಗಿ ಪ್ರಭುಗೌಡ ಪಾಟೀಲ, ಖಜಾಂಚಿಯಾಗಿ ರಾಜು ಕೊಂಗಿ ತಂಗಡಗಿ ಆಯ್ಕೆಯಾದರು.
ಎಲ್ಲ ಪದಾಧಿಕಾರಿಗಳು ಸನ್ಮಾನ ಸ್ವೀಕರಿಸಿದ ನಂತರ ಅಧ್ಯ ಸುರೇಶಗೌಡ ಮಾತನಾಡಿ, ಗುತ್ತಿಗೆದಾರರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಬಿಲ್ ಬಾಕಿ ಬಹಳಷ್ಟು ಉಳಿದುಕೊಂಡಿದೆ. ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯ ಸಿ.ಎಸ್. ನಾಡಗೌಡರ ಸಹಕಾರದೊಂದಿಗೆ ಗುತ್ತಿಗೆದಾರರ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತದೆ ಎಂದರು.
ಪ್ರಮುಖರಾದ ರುದ್ರಗೌಡ ಅಂಗಡಗೇರಿ, ಚಂದು ಕರೇಕಲ್, ಪರಶುರಾಮ ಬಯ್ಯಾಪುರ, ಸಚೀನ ಪಾಟೀಲ, ರಾಜು ನಾಯಕ, ಸಚೀನ ಪವಾರ, ಅಪು$್ಪಗೌಡ ಮಾಡಗಿ, ಬಸವರಾಜ ಕೋಳೂರ ಇದ್ದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯ ಲಕ್ಷ$್ಮಣ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.