ಕಾಂಗ್ರೆಸ್ ಬೆಂಬಲಿತರ ಆಯ್ಕೆ, ವಿಜಯೋತ್ಸವ

27KAGWAD1.jpg
Published on

ಕಾಗವಾಡ: ತಾಲೂಕಿನ ಜುಗೂಳ ಗ್ರಾಪಂ ಎರಡನೇ ಅವಗೆ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಕಾಕಾಸಾಬ ಪಾಟೀಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೀತಾ ಕಾಂಬಳೆ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ಜುಗೂಳ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಕಾಕಾಸಾಬ ಪಾಟೀಲ, ನೀತಾ ಕಾಂಬಳೆ, ಅನೀಲ ಕಡೋಲಿ ಇತರರಿದ್ದರು.
ಜುಗೂಳ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಕಾಕಾಸಾಬ ಪಾಟೀಲ, ನೀತಾ ಕಾಂಬಳೆ, ಅನೀಲ ಕಡೋಲಿ ಇತರರಿದ್ದರು.

14ಮತ ಪಡೆದ ಜಹಾಂಗೀರ ಕಲಾವಂತ  ವಿರುದ್ದ 16 ಮತ ಪಡೆದು ಕಾಕಾಸಾಬ ಪಾಟೀಲ ಅಧ್ಯಕ್ಷರಾದರು. ಗ್ರಾಪಂ ಅಧ್ಯಕ್ಷ ಕಾಕಾಸಾಬ ಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿದ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಣ್ಣಾಸಾಬ ಪಾಟೀಲ, ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ಚುನಾವಣಾಕಾರಿಯಾಗಿ ನಿಂಗಪ್ಪ ಮಸಳಿ, ಸಹಾಯಕರಾಗಿ ಜಿ.ಎಂ.ಸ್ವಾಮಿ, ಶಿಲ್ಪಾ ನಾಯ್ಕೋಡಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಮುಖಂಡ ಅನೀಲ ಕಡೋಲಿ, ರವೀಂದ್ರ ವಾಂಟೆ, ಬಸವರಾಜ ನಂದ್ಯಾಳೆ, ಅಸ್ಲಂ ಅಪರಾದ್, ಬಿ.ಐ.ಪಾಟೀಲ, ರಾಜೇಂದ್ರ ಕಡೋಲಿ, ಅನಿಲ ಸುಂಕೆ, ಉಮೇಶ ಪಾಟೀಲ, ಚಿದಾನಂದ ಮಿನಚೆ, ಉಮೇಶ ಪಾಟೀಲ, ಅವಿನಾಶ ಪಾಟೀಲ, ರವಿ ಗುಣಕೆ, ನಿತಿನ ಪಾಟೀಲ, ಇರ್ಷಾದ್ ಮುಜಾವರ್, ಸಂತೋಷ ಪಾಟೀಲ, ಮಹೇಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net