

ಬಸವನಬಾಗೇವಾಡಿ: ಪಟ್ಟಣದ ಗುರುಕೃಪಾ ವಿದ್ಯಾಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವೇಶ್ವರ ಸಹಕಾರಿ ಕೋ ಆಪ್ರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಎಂಟು ಸ್ಧಾನಗಳಿಗೆ ಭಾನುವಾರ ಮತದಾನ ನಡೆಯಿತು. ಒಟ್ಟು 682 ಮತದಾರರ ಪೈಕಿ 656 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಸಾಮಾನ್ಯ ೇತ್ರದಿಂದ ಸ್ಪರ್ಧೆ ಮಾಡಿದ ಲೋಕನಾಥ ಅಗರವಾಲ 463 ಮತ, ಸಿದ್ದರಾಮಪ್ಪ (ಮುತ್ತು) ಕಿಣಗಿ 326, ಜಗದೀಶ ಕೊಟ್ರಶೆಟ್ಟಿ 355, ರಮೇಶ ಕೋರಿ 292, ಬಸವರಾಜ ಗೊಳಸಂಗಿ 360, ಅನೀಲ ದುಂಬಾಳಿ 442, ಶಂಕರಗೌಡ ಬಿರಾದಾರ 408, ರಮೇಶ ಯಳಮೇಲಿ 279, ಗುರುಸಂಗಪ್ಪ ಹಳ್ಳೂರ 319, ಉಮೇಶ ಹಾರಿವಾಳ 365, ಸಿದ್ದಲಿಂಗಸ್ವಾಮಿ ಹಿರೇಮಠ 200 ಹಾಗೂ ಪರಸಪ್ಪ ಅಡಗಿಮನಿ 82 ಮತ ಪಡೆದಿದ್ದಾರೆ.
ಪರಿಶಿಷ್ಟ ಜಾತಿ: ನೀಲು ನಾಯಕ 423 ಮತ, ರವಿ ರಾಠೋಡ 188 ಮತ ಪಡೆದಿದ್ದಾರೆ. * ಅವಿರೋಧ ಆಯ್ಕೆ: ಸಾಮಾನ್ಯ ಮಹಿಳಾ ೇತ್ರದಿಂದ ಸುರೇಖಾ ಈರಣ್ಣ ಪಟ್ಟಣಶೆಟ್ಟಿ, ಕಮಲಾ ತಿಪ್ಪನಗೌಡರ, ಹಿಂದುಳಿದ ವರ್ಗ (ಬ) ಶಿವಾನಂದ ಪಟ್ಟಣಶೆಟ್ಟಿ, ಹಿಂದುಳಿದ ವರ್ಗ (ಅ) ಶ್ರೀಶೈಲ ಪತ್ತಾರ, ಪರಿಶಿಷ್ಟ ಪಂಗಡ ಮೀಸಲು ೇತ್ರದಿಂದ ಯಮನಪ್ಪಗೌಡ ಪಾಟೀಲ ಅವಿರೋಧ ಆಯ್ಕೆಯಾಗಿದ್ದಾರೆ.