ಬಿಜೆಪಿ ಅಭ್ಯರ್ಥಿ ಯದುವೀರ ಮತಯಾಚನೆ

mysore
Published on

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಗರದಲ್ಲಿ ದಿನವಿಡೀ ಮತಪ್ರಚಾರ ಮಾಡಿದರು.


ಬೆಳಗ್ಗೆ ಕುಕ್ಕರಹಳ್ಳಿ ಕೆರೆ ಭೇಟಿ ನೀಡಿ ವಾಯುವಿಹಾರಿಗಳೊಂದಿಗೆ ಮಾತುಕತೆ ನಡೆಸಿ ಮತಯಾಚನೆ ನಡೆಸಿದರು. ಬಳಿಕ ಬಿಜೆಪಿ ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತ ಮೋರ್ಚಾದ ಸಭೆಯಲ್ಲಿ ಪಾಲ್ಗೊಂಡರು. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ತಂತ್ರ ರೂಪಿಸಲಾಯಿತು.


ಸೈಕಲ್ ಅಗರಬತ್ತಿ ಉತ್ಪಾದನೆ ಮಾಡುವ ರಂಗರಾವ್ ಆ್ಯಂಡ್ ಸನ್ಸ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿ ಬಳಿ ಮತಯಾಚನೆ ಮಾಡಿದರು. ಈ ನಡುವೆ, ಯದುವೀರ ಅವರು ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಸ್ಥರಲ್ಲಿ ಮತಯಾಚಿಸಿದರು.


ನಗರದ ಹೊರವಲಯದ ಲಿಂಗಾಂಬುಧಿ ಪಾಳ್ಯದಲ್ಲಿ ಸಿದ್ದಪ್ಪಾಜಿ ಕಂಡೋತ್ಸವ, ದಾಳಹಬ್ಬದಲ್ಲಿ ಪಾಲ್ಗೊಂಡು ಗ್ರಾಮಸ್ಥರೊಂದಿಗೆ ಮಾತನಾಡಿದರು. ಯಾದವಗಿರಿಯಲ್ಲಿ ಗುಜರಾತಿ ಸಂಘದ ಸಭೆಯಲ್ಲಿ ಪಾಲ್ಗೊಂಡರು. ಅಶೋಕ ರಸ್ತೆಯಲ್ಲಿರುವ ಜೈನ ಸಮುದಾಯ ಸಭೆಯಲ್ಲಿ ಪಾಲ್ಗೊಂಡು ಮತ ಕೇಳಿದರು. ಸಂಜೆ ತಿಲಕನಗರ, ಕೈಲಾಸಪುರಂ ಹಾಗೂ ಮಂಡಿ ವಾರ್ಡ್‌ನಲ್ಲಿ ಪಾದಯಾತ್ರೆ ನಡೆಸಿದರು.

ಶ್ರೀಗಳಿಂದ ಆಶೀರ್ವಾದ


ನಗರದ ಟಿ.ಕೆ.ಲೇಔಟ್‌ನಲ್ಲಿರುವ ಶ್ರೀಕೃಷ್ಣ ಧಾಮದಲ್ಲಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಯದುವೀರ ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಮುಖಂಡರಾದ ಜೋಗಿ ಮಂಜು, ವಸಂತ್‌ಕುಮಾರ್, ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿಶಾಸ್ತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net