

ಬ್ರಹ್ಮದೇವನಮಡು: ದೇವರಹಿಪ್ಪರಗಿ ತಾಲೂಕಿನ ಅಸಂತಾಪೂರ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ದ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಬಸನಗೌಡ ದೊಡ್ಡಬಸಪ್ಪಗೌಡ ಪಾಟೀಲ ಗುಂಪು ಭಾನುವಾರ ಭರ್ಜರಿ ಗೆಲುವು ಸಾಧಿಸಿದೆ.
ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಬಸನಗೌಡ ಪಾಟೀಲ, ರುದ್ರಸ್ವಾಮಿ ಮಠ, ಹಳ್ಳೇಣ್ಣ ಚೌದ್ರಿ, ಪ್ರಭುಗೌಡ ಬೇಕಿನಾಳ, ನಿಂಗಣ್ಣ ಕೋರವಾರ ಹಾಗೂ ಮಹಿಳಾ ಮೀಸಲು ಸ್ಥಾನಕ್ಕೆ ಸುಗಾಲಾದೇವಿ ಕೊಳ್ಳಿ, ಶಿವಕಾಂತಮ್ಮ ಪೂಜಾರಿ, ಹಿಂದುಳಿದ ವರ್ಗ ಅ ಸ್ಥಾನಕ್ಕೆ ಬಸಲಿಂಗಪ್ಪ ಸಜ್ಜನ, ಹಿಂದುಳಿದ ವರ್ಗ ‘ಬ’ ಸ್ಥಾನಕ್ಕೆ ಬಸನಗೌಡ ಬಿರಾದಾರ, ಪರಿಶಿಷ್ಟ ಜಾತಿ ಸ್ಥಾನಕ್ಕೆ ಸಂಗಮ್ಮ ಹರಿಜನ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಮಲ್ಲಪ್ಪಗೌಡ ಬಿರಾದಾರ, ಬಿನ್ ಸಾಲಗಾರ ಸ್ಥಾನಕ್ಕೆ ವಿಶ್ವನಾಥ ಪಾಟೀಲ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರೀಪಾಶಾ ಕೆಂಭಾವಿ ಘೋಷಣೆ ಮಾಡಿದರು.
ವಿಜೇತರ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಹಳ್ಳೆಪ್ಪಗೌಡ ಚೌದ್ರಿ, ಹಣಮಂತ್ರಾಯಗೌಡ ಬಿರಾದಾರ, ಭೀಮನಗೌಡ ಬಿರಾದಾರ, ದೊಡ್ಡಬಸಪ್ಪಗೌಡ ಪಾಟೀಲ, ಯಂಕನಗೌಡ ಚೌದ್ರಿ, ಶಂಕರಗೌಡ ಕುರಕಳ್ಳಿ, ಮಲ್ಲನಗೌಡ ಬೇಕಿನಾಳ, ತಮ್ಮಣ್ಣ ಹಿರೇಕುರಬರ, ಭೀಮರಾಯ ಅಮರಗೋಳ, ಆರ್.ಜಿ. ಮಾನಶೇಟ್ಟಿ, ಮಲ್ಲಿಕಾರ್ಜುನ ಮನಗೂಳಿ, ದೇವೀಂದ್ರ ತೊನಶ್ಯಾಳ, ನಿಂಗಣ್ಣ ಅರಕೇರಿ, ಗುರಣ್ಣಗೌಡ ಪಾಟೀಲ, ಸಂಗಣ್ಣ ಸಜ್ಜನ, ಅಪ್ಪಸಾಬಗೌಡ ಬಿರಾದಾರ, ಶರಣಪ್ಪ ಸಜ್ಜನ, ಲಕ್ಷ್ಮೀಕಾಂತಗೌಡ ಬಿರಾದಾರ, ರಾಮನಗೌಡ ಬೆಕಿನಾಳ ಇತರರಿದ್ದರು.