ಪ್ರಲ್ಹಾದ ಜೋಶಿಗೆ ರಾಜಸ್ಥಾನ ಚುನಾವಣೆ ಉಸ್ತುವಾರಿ

Pralhad Joshi New
Published on

ಹುಬ್ಬಳ್ಳಿ : ರಾಜಸ್ಥಾನ, ಛತ್ತಿಸಗಢ, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಚುನಾವಣೆ ಉಸ್ತುವಾರಿಗಳನ್ನು ನೇಮಿಸಿದ್ದು, ರಾಜಸ್ಥಾನ ಚುನಾವಣೆಯ ಉಸ್ತುವಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ವಹಿಸಿದ್ದಾರೆ.

ನಿತಿನ್ ಪಟೇಲ್ ಹಾಗೂ ಕುಲದೀಪ ಬಿಶ್ನೋಯಿ ಅವರನ್ನು ರಾಜಸ್ಥಾನ ವಿಧಾನಸಭೆ ಚುನಾವಣೆಯ ಸಹ ಚುನಾವಣೆ ಪ್ರಭಾರಿಗಳನ್ನಾಗಿ ನೇಮಿಸಲಾಗಿದೆ.

ಇದರೊಂದಿಗೆ ಛತ್ತಿಸಗಢ ಚುನಾವಣೆ ಉಸ್ತುವಾರಿಯನ್ನಾಗಿ ಓಂ ಪ್ರಕಾಶ ಮಾಥೂರ, ಸಹ ಉಸ್ತುವಾರಿಯನ್ನಾಗಿ ಮನಸುಖ ಮಂಡಾವಿಯಾ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಉಸ್ತುವಾರಿಯನ್ನಾಗಿ ಭುಪೇಂದ್ರ ಯಾದವ, ಸಹ ಉಸ್ತುವಾರಿಯನ್ನಾಗಿ ಅಶ್ವಿನಿ ವೈಷ್ಣವ, ತೆಲಂಗಣಾದ ಉಸ್ತುವಾರಿಯನ್ನಾಗಿ ಪ್ರಕಾಶ ಜಾವಡೇಕರ, ಸಹ ಉಸ್ತುವಾರಿಯನ್ನಾಗಿ ಸುನೀಲ ಬಂಸಲ ಅವರನ್ನು ಜೆ.ಪಿ. ನಡ್ಡಾ ನೇಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net