ನಾಳೆಯಿಂದ 27 ಗ್ರಾಪಂಗಳಲ್ಲಿ ಚುನಾವಣೆ

Gram-Panchayat-Election-800x445-1-1
Published on

ಸೊರಬ: ತಾಲೂಕಿನ 35 ಗ್ರಾಮಪಂಚಾಯಿತಿಗಳಲ್ಲಿ ಅಗಸನಹಳ್ಳಿ, ಎಣ್ಣೆಕೊಪ್ಪ, ಗೆಂಡ್ಲ, ಹೆಚ್ಚೆ, ಕಾತುವಳ್ಳಿ, ಮುಟುಗುಪ್ಪೆ, ತತ್ತೂರು ಹಾಗೂ ತವನಂದಿ ಗ್ರಾಪಂಗಳನ್ನು ಹೊರತುಪಡಿಸಿ ಉಳಿದ 27 ಗ್ರಾಪಂಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆ.8ರಿಂದ 18ರವರೆಗೆ ಚುನಾವಣೆ ನಡೆಯಲಿದೆ. ಈ ಸಂಬAಧ ಕಳೆದ ಜೂನ್ 26ರಂದು ಪಟ್ಟಣದಲ್ಲಿ ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾಽಕಾರಿ ಡಾ.ಆರ್ ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮಿಸಲಾತಿಯನ್ನು ನಿಗದಿಪಡಿಸಲಾಗಿತ್ತು. ದಿನಾಂಕ ನಿಗದಿ ಪಡಿಸುತಿದ್ದಂತೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಆ.8ರಂದು ಬಿಳುವಾಣಿ, ಹರೀಶಿ, 9ಕ್ಕೆ ನ್ಯಾರ್ಶಿ, ಉದ್ರಿ, 10ಕ್ಕೆ ಅಂಡಗಿ, ಬೆನ್ನೂರು, ಹುರಳಿ, ಜಡೆ, ಶಿಗ್ಗಾ, 11ಕ್ಕೆ ಚಿಟ್ಟೂರು, ದ್ಯಾವನಹಳ್ಳಿ, ಹಂಚಿ, ಮಾವಲಿ, ತಲಗಡ್ಡೆ, 14ಕ್ಕೆ ಭಾರಂಗಿ, ಚಂದ್ರಗುತ್ತಿ, ಇಂಡುವಳ್ಳಿ, ಕುಪ್ಪಗಡ್ಡೆ, ತಲಗುಂದ, 16ಕ್ಕೆ ಗುಡವಿ, ಹೆಗ್ಗೋಡು, ನಿಸರಾಣಿ, ಶಕುನವಳ್ಳಿ, 17ಕ್ಕೆ ದೂಗೂರು, ಹೊಸಬಾಳೆ, ಮೂಡಿ ದೊಡ್ಡಿಕೊಪ್ಪ, 18ಕ್ಕೆ ಉಳವಿ ಗ್ರಾಪಂನಲ್ಲಿ ಚುನಾವಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net