ಎಸ್‌ಡಿಎಂಸಿ ಅಧ್ಯಕ್ಷರಾಯ್ಕೆಗೂ ಚುನಾವಣೆ

SDMC SVR
Published on

ಸವಣೂರ: ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೂ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ತಾಲೂಕಿನ ಬರದೂರ ಗ್ರಾಮದಲ್ಲಿ ಶನಿವಾರ ಎದುರಾಯಿತು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಹಲವರು ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ಹಿನ್ನೆಲಯಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಯಿತು.

ಒಟ್ಟು 18 ಸದಸ್ಯರ ಮತಗಳಲ್ಲಿ 9 ಮತ ಪಡೆದ ಶಂಕರಗೌಡ ಚನ್ನವೀರಗೌಡ್ರ ಅಧ್ಯಕ್ಷರಾಗಿ ಆಯ್ಕೆಗೊಂಡರೆ, ಉಪಾಧ್ಯಕ್ಷೆಯಾಗಿ ನಿರ್ಮಲಾ ಹೊಸಮನಿ ಆಯ್ಕೆಯಾದರು.

ಶಿಕ್ಷಣ ಇಲಾಖೆ ಅಧಿಕಾರಿಗಳಾದ ಡಿ.ಆರ್. ತೋಟಗೇರ, ಎಂ. ಆರ್. ಗರಗದ, ಬಿ.ಡಿ. ಸಂಗಣ್ಣನವರ, ಮುಖ್ಯ ಶಿಕ್ಷಕರಾದ ಬಿ.ವಿ. ಸವಣೂರ, ಸಹ ಶಿಕ್ಷಕರಾದ ವಸಂತಕುಮಾರ ತಳವಾರ, ಎಸ್.ಎಲ್.ದೊಡ್ಡಮನಿ, ಸಂಗೀತ ರಜಪೂತ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net