ನಗರಸಭೆ ಚುನಾವಣೆ: ಬಿಜೆಪಿಯಲ್ಲಿ ಮುಗಿಯದ ಗೊಂದಲ

ಹೊಸಪೇಟೆ ನಗರಸಭೆ ಕಚೇರಿ.
Published on

ನಾಮಪತ್ರ ಪ್ರಕ್ರಿಯೆ ಆರಂಭಗೊAಡರೂ ಅಂತಿಮಗೊಳ್ಳದ ಅಭ್ಯರ್ಥಿಗಳು

ಹೊಸಪೇಟೆ:ಹೊಸಪೇಟೆ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ನಾಮಪತ್ರ ಪ್ರಕ್ರಿಯೆ ಶುರುವಾದರೂ, ಆಡಳಿತಾರೂಢ ಬಿಜೆಪಿಯಲ್ಲಿ ಗೊಂದಲ ಮುಂದುವರಿದಿದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಹಗ್ಗಜಗ್ಗಾಟ ನಡೆಸಿದ್ದು, ಬಿಜೆಪಿಯಲ್ಲಿ ಇನ್ನೂ ಸಂಧಾನ ಸಭೆ ನಡೆಯುತ್ತಿದೆ.

ಪರಿಶಿಷ್ಟ ಜಾತಿ(ಮಹಿಳೆ)ಗೆ ಮೀಸಲಾಗಿರುವ ಅಧ್ಯಕ್ಷ ಹುದ್ದೆಗೆ ೨೩ನೇ ವಾರ್ಡ್ನ ಬಿಜೆಪಿ ಸದಸ್ಯೆ ಗಂಗಮ್ಮ ನಾಗೇಂದ್ರ, ೩೦ನೇ ವಾರ್ಡ್ನ ಪಕ್ಷೇತರ ಸದಸ್ಯೆ ಕು.ಎ.ಲತಾ, ಉಪಾಧ್ಯಕ್ಷ(ಸಾಮಾನ್ಯ) ಸ್ಥಾನಕ್ಕೆ ೨ನೇ ವಾರ್ಡ್ನ ಜೀವರತ್ನಂ, ೫ನೇ ವಾರ್ಡ್ನ ಎನ್.ರೂಪೇಶ ಕುಮಾರ್ ಮತ್ತು ೨೯ನೇ ವಾರ್ಡ್ನ ರಮೇಶ ಗುಪ್ತಾ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಯಾರೊಬ್ಬರೂ ಪಟ್ಟು ಸಡಿಲಿಸುತ್ತಿಲ್ಲ. ಹೀಗಾಗಿ ಪಕ್ಷದ ಕಚೇರಿಯಲ್ಲಿ ವರಿಷ್ಠರ ಸಮ್ಮುಖದಲ್ಲಿ ಸಂಧಾನ ಹಾಗೂ ಸಮಾಲೋಚನೆ ಸಭೆ ಸೇರಿದ್ದಾರೆ.
ಸಭೆಯಲ್ಲಿ ಹಾಜರಿರುವ ಬಹುತೇಕ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಎ.ಲತಾ ಮತ್ತು ಉಪಧ್ಯಕ್ಷ ಸ್ಥಾನಕ್ಕೆ ರೂಪೇಶ್ ಕುಮಾರ್ ಇಲ್ಲವೇ ಜೀವರತ್ನಂ ಅವರನ್ನು ಘೋಷಿಸಿ, ಅವಿರೋಧ ಆಯ್ಕೆಗೆ ಅವಕಾಶ ನೀಡುವಂತೆ ವರಿಷ್ಠರ ಎದುರು ಆಗ್ರಹಿಸುತ್ತಿದ್ದು, ಇದೇ ಹೆಸರು ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎಂದು ಖಚಿತ ಮೂಲಗಳು ತಿಳಿಸಿವೆ.

೨೦೨೧ರ ಡಿಸೆಂಬರ್‌ನಲ್ಲಿ ನಡೆದ ಹೊಸಪೇಟೆ ನಗರಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ೧೨, ಬಿಜೆಪಿ ೧೦, ಓರ್ವ ಆಮ್ ಆದ್ಮಿ ಪಾರ್ಟಿ ಹಾಗೂ ೧೨ ಜನ ಸ್ವತಂತ್ರರಾಗಿ ಗೆಲುವು ದಾಖಲಿಸಿದ್ದರು. ಈ ಪೈಕಿ ೮ ಜನ ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಬಿಜೆಪಿ ಅಧಿಕಾರದ ಗದ್ದುಗೆಗೇರಲಿದೆ. ಬಿಜೆಪಿ ಆಂತರಿಕ ಒಪ್ಪಂದದನ್ವಯ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net