

ಸಂಡೂರು: ಯಾವುದೇ ಚುನಾವಣೆ ಬಂತೆಂದರೆ ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು. ಮತದಾನ ಪವಿತ್ರ ಕರ್ತವ್ಯವೆಂದು ಭಾವಿಸಬೇಕು ಎಂದು ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಎಚ್.ಷಡಕ್ಷರಯ್ಯ ಹೇಳಿದರು.
ತಾಪಂ ಕಚೇರಿ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಶುಕ್ರವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ತಾಲೂಕಿನಲ್ಲಿ ಶೇ.76.16 ಮತದಾನವಾದರೆ, ಎಂಪಿ ಬೈಎಲೆಕ್ಷನ್‌ನಲ್ಲಿ ಶೇ.68 ಮತದಾನವಾಗಿದೆ. ಈಗ ಲೋಕಸಭೆ ಚುನಾವಣೆಯಲ್ಲಿ ಶೇ.90-95 ಮತದಾನವಾಗಬೇಕು ಎಂದರು.
ಅಂಗವಿಕಲರು, ವಯಸ್ಸಾದವರಿಗೆ ವ್ಹೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. 85 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿ ವೋಟ್ ಮಾಡಲು ಅನುಕೂಲ ಮಾಡಲಾಗಿದೆ. ಶೇ.90ರಿಂದ 95 ಮತದಾನವಾಗಲು ಆಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೈಕ್ರೋ ಪ್ಲಾನ್‌ನಡಿ ಯೋಜನೆ ರೂಪಿಸಿಕೊಂಡಿದ್ದು, ಸ್ವೀಪ್ ಸಮಿತಿಯಿಂದ ತರಬೇತಿ ಕೊಡಲಾಗಿದೆ. ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಕೆ.ಜಯಣ್ಣ, ಸಿಡಿಪಿಒ ಎಳೆ ನಾಗಪ್ಪ, ತಾಪಂ ಎಡಿ ದುರುಗಪ್ಪ, ಪುರಸಭೆ ಅಧಿಕಾರಿ ಪ್ರಭುರಾಜ್ ಹಗರಿ ಮಾತನಾಡಿದರು. ತಾಪಂ ಸಿಬ್ಬಂದಿ ರೋಷನ್, ಜಡೆಪ್ಪ, ಪಿಡಿಒ ತಿಮ್ಮಪ್ಪ ಕಾಕಳ್ಳಿ ಇತರರಿದ್ದರು.