ಚುನಾವಣೆ: ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

fmcc college
Published on

ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ೨೦೨೪-೨೫ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ  ನಡೆಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಮೇಜರ್ ರಾಘವ ಬಿ, ಡಾ.ನಯನ ಕಶ್ಯಪ್, ಡಾ.ರೇಣುಶ್ರೀ, ಶ್ರೀ ನಾಗೇಂದ್ರ, ಡಾ. ಶ್ರೀಧರ್ ಹೆಗಡೆ, ತಳವಾರ್, ಪೂಣಚ್ಚ, ಡಾ.ಮಹದೇವಯ್ಯ, ಖುರ್ಷಿದ ಬಾನು ಇವರು ಉಪಸ್ಥಿತರಿದ್ದರು.

ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ತರಗತಿ ಪ್ರತಿನಿಧಿಗಳು ಮತದಾನ ಮಾಡುವ ಮೂಲಕ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎನ್.ವಿ.ಮಹೇಂದ್ರ(ತೃತೀಯ ಬಿ.ಎ), ಉಪಾಧ್ಯಕ್ಷರಾಗಿ ಟಿ.ಎಸ್.ಆಲಿನ್ ಜೇಶ್ಮ(ತೃತೀಯ ಬಿ.ಎ ಎಚ್‌ಆರ್‌ಡಿ), ಕಾರ್ಯದರ್ಶಿಯಾಗಿ ಎಂ.ಪಿ.ಮೊನಿಶ್(ತೃತೀಯ ಬಿ.ಬಿ.ಎ), ಜಂಟಿ ಕಾರ್ಯದರ್ಶಿಯಾಗಿ ರಾಹುಲ್ ರಾಜನ್(ದ್ವಿತೀಯ ಬಿ.ಎಸ್.ಸಿ) ಮತ್ತು ಕೆ.ಟಿ.ವರ್ಷ(ದ್ವಿತೀಯ ಬಿ.ಎಸ್.ಸಿ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೆ.ಫರ್ದೀನ್(ತೃತೀಯ ಬಿ.ಎ ಮತ್ತು ಜಿ.ಹೆಚ್.ಐಶ್ವರ್ಯ(ತೃತೀಯ ಬಿ.ಎ) ಇವರುಗಳು ಆಯ್ಕೆಯಾದರು.

ಪ್ರಾಂಶುಪಾಲರು ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಕಾಲೇಜಿನ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುವಂತೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಧನ್ಯವಾದ ಅರ್ಪಿಸುವ ಮೂಲಕ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net