

ಸಿರಗುಪ್ಪ: ಸಿರಗುಪ್ಪ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ಆಡಳಿತ ಮಂಡಳಿ 14 ಸ್ಥಾನಗಳಲ್ಲಿ 6ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. 8 ಸ್ಥಾನಗಳಿಗೆ ಚುನಾವಣೆ ನಡೆಯಿತು. ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ಮತದಾನ ಪ್ರಕ್ರಿಯೆ ಶನಿವಾರ ನಡೆಯಿತು.
ಅವಿರೋಧ ಆಯ್ಕೆಯಾದ ಸಾಲಗಾರರ ಕ್ಷೇತ್ರಗಳಾದ ಹಚ್ಚೊಳ್ಳಿ ಸಾಮಾನ್ಯ ಕ್ಷೇತ್ರದಿಂದ ಶಿವರಾಮೆಗೌಡ, ರಾವಿಹಾಳ್ ಸಾಮಾನ್ಯ ಕ್ಷೇತ್ರದಿಂದ ಕೆ.ಮಲ್ಲಯ್ಯ, ಬಾಗೇವಾಡಿ ಹಿಂದುಳಿದ ವರ್ಗ-ಪ್ರವರ್ಗ ಎ ಕ್ಷೇತ್ರದಿಂದ ಪುರುಗೈ ತಾಯಪ್ಪ, ಹಿಂದುಳಿದ ವರ್ಗ ಪ್ರವರ್ಗ-ಬಿ ಸಿರಿಗೇರಿ ಕ್ಷೇತ್ರದಿಂದ ಶಾಂತನಗೌಡ, ಸಾಮಾನ್ಯ ಕ್ಷೇತ್ರ ಕರೂರು ಕ್ಷೇತ್ರದಿಂದ ಡಿ.ಚಂದ್ರಾರೆಡ್ಡಿ, ಹಿರೇಹಾಳು ಸಾಮಾನ್ಯ ಕ್ಷೇತ್ರದಿಂದ ಗೌಡಪ್ಪನವರ ಮರೇಗೌಡ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾಯಿತರಾದ ಸದಸ್ಯರು: ರಾರಾವಿ ಮಹಿಳಾ ಕ್ಷೇತ್ರದಿಂದ ಎಚ್.ಸರಸ್ವತಿ, ಸಿರುಗುಪ್ಪ ಮಹಿಳಾ ಕ್ಷೇತ್ರದಿಂದ ಎಂ.ರಾಧಾ, ಕೆಂಚನಗುಡ್ಡ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಶಂಕ್ರಪ್ಪ, ತಾಳೂರು ಪರಿಶಿಷ್ಟ್ಟ ಪಂಗಡ ಕ್ಷೇತ್ರದಿಂದ ಗೋಣ್ಣೆಪ್ಪ ನವರ ನಾಗರಾಜ, ತೆಕ್ಕಲಕೋಟೆ ಸಾಮಾನ್ಯ ಕ್ಷೇತ್ರದಿಂದ ಪಿ.ತಿಮ್ಮಪ್ಪ, ಬಲಕುಂದಿ ಸಾಮಾನ್ಯ ಕ್ಷೇತ್ರದಿಂದ ವಿ.ತಿಮ್ಮನಗೌಡ, ಕೆ.ಬೆಳಗಲ್ಲು ಸಾಮಾನ್ಯ ಕ್ಷೇತ್ರದಿಂದ ಚೊಕ್ಕ ಬಸವನಗೌಡ, ಹೆರಕಲ್ಲು ಸಾಲಗಾರರಲ್ಲದ ಸಾಮಾನ್ಯ ಕ್ಷೇತದಿಂದ್ರ ಬಿ.ಎಂ.ಜಡೆಯ್ಯಸ್ವಾಮಿ ಚುನಾಯಿತರಾಗಿದ್ದಾರೆ ಎಂದು ತಹಸೀಲ್ದಾರ್ ಎಚ್.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಲಿ ಅಧ್ಯಕ್ಷ ಚೊಕ್ಕಬಸವನ ಗೌಡ ತಂಡಕ್ಕೆ ಜಯ: ಸಿರಗುಪ್ಪ ಸಹಕಾರಿ ಕ್ಷೇತ್ರ ರೈತರು, ಹಿಂದುಳಿದವರ ಕ್ಷೇತ್ರವಾಗಿದ್ದು ಅವರ ನಿರಂತರ ಸೇವೆಯ ನಮ್ಮ ತಂಡದ ಗೆಲುವಿಗೆ ಕಾರಣವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಣ್ಣ ಮತ್ತು ಅತಿ ಸಣ್ಣ ರೈತರು ಸಹಕಾರ ಬ್ಯಾಂಕ್‌ಗೆ ಜೀವಾಳ, ಅವರ ನಿರಂತರ ಸೇವೆಯೇ ಸಹಕಾರಿ ಏಳಿಗೆಗೆ ಸಾಧ್ಯವಾಗುತ್ತದೆ ಎಂದರು.
ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ, ಎಂ.ಎಸ್.ಸೋಮಲಿಂಗಪ್ಪ ಅವರ ತಂಡವನ್ನು ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಮಾಡಿದರೆ ಇಲ್ಲಿನ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತದೆ ಎಂಬ ಅಂಶವನ್ನು ಅರಿತುಕೊಂಡ ಮತದಾರರು ಅವರ ತಂಡಕ್ಕೆ ಮತ ನೀಡದೇ ಸೋಲಿಸಿದ್ದಾರೆ ಎಂದರು.