ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಆಗ್ರಹ

8Khanapur2-Web
ಚುನಾವಣೆ ಕರ್ತವ್ಯಕ್ಕೆ ನಿಯೋಜಿಸದಂತೆ ಆಗ್ರಹಿಸಿ ಖಾನಾಪುರ ತಾಲೂಕಿನ ಪಿಡಿಒಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಗುರುರಾಜ, ಸುನೀಲ ಇತರರಿದ್ದರು.
Published on

ಖಾನಾಪುರ: ಮುಂಬರುವ ದಿನಗಳಲ್ಲಿ ಜರುಗಲಿರುವ ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಪಿಡಿಒಗಳನ್ನು ಸಹಾಯಕ ಚುನಾವಣಾಅಧಿಕಾರಿಗಳನ್ನಾಗಿ ನೇಮಕಗೊಳಿಸದಂತೆ ತಾಲೂಕಿನ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಕೆ.ಆರ್.ಕೋಲಕಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಭಾಕರ ಭಟ್, ತಾಲೂಕಿನ ಬಹಳಷ್ಟು ಗ್ರಾಪಂಗಳಲ್ಲಿ ಸಿಬ್ಬಂದಿ ಕೊರತೆಯಿದೆ. ಪರಿಣಾಮ ತಾಲೂಕಿನ ಶೇ.70 ಪಿಡಿಒಗಳಿಗೆ ಎರಡು ಗ್ರಾಪಂಗಳ ಪ್ರಭಾರ ವಹಿಸಲಾಗಿದೆ. ಜತೆಗೆ ಪಿಡಿಒಗಳು ಕಳೆದ ಹಲವು ವರ್ಷಗಳಿಂದ ಗ್ರಾಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದಿಂದ ನಿಷ್ಪಕ್ಷಪಾತವಾಗಿ ಚುನಾವಣೆ ಕರ್ತವ್ಯ ನೆರವೇರಿಸಲು ಸಮಸ್ಯೆಯಾಗುತ್ತಿದೆ. ಕಾರಣ ಪಿಡಿಒಗಳನ್ನು ಚುನಾವಣಾ ಕರ್ತವ್ಯದಿಂದ ದೂರವಿಟ್ಟು ಬೇರೆ ಇಲಾಖೆಯವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕಗೊಳಿಸಬೇಕು ಎಂದು ಆಗ್ರಹಿಸಿದರು. ಪಿಡಿಒಗಳಾದ ಆನಂದ ಭಿಂಗೆ, ದೇವರಾಜ ಎಂ.ಜಿ., ಗಣೇಶ ಕೆ.ಎಸ್., ಪ್ರೀತಿ ಪತ್ತಾರ, ಜ್ಯೋತಿಭಾ ಕಾಮಕರ, ಗುರುರಾಜ ಚರಕಿ, ಬಾಲರಾಜ ಭಜಂತ್ರಿ, ಸುನೀಲ ಅಂಬಾರಿ, ರಘು ಬಿ.ಎನ್., ಸಂಜೀವ ಉಪ್ಪಿನ, ವೀಣಾ ಗೌಡ, ಆರತಿ ಅಂಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net