ಚುನಾವಣೆ ಪ್ರಜಾತಂತ್ರದ ಉತ್ಸವ

26SND-03 - Copy
Published on

ಸಿಂಧನೂರು: ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಆಗಿದ್ದು, ತಪ್ಪದೆ ಮತದಾನ ಮಾಡುವ ಜತೆಗೆ ಮತದಾನ ಮಾಡುವಂತೆ ಇತರರನ್ನೂ ಪ್ರೋತ್ಸಾಹಿಸಬೇಕೆಂದು ತಹಸೀಲ್ದಾರ್ ಅರುಣ್ ದೇಸಾಯಿ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಹಯೋಗದಲ್ಲಿ ಬುಧವಾರ ಮತದಾನ ಜಾಗೃತಿ ಹಾಗೂ ಮತದಾನದ ಮಹತ್ವದ ಕುರಿತ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಚುನಾವಣೆ ಪ್ರಜಾತಂತ್ರದ ಉತ್ಸವವಾಗಿದೆ. ಮೇ.10 ರಂದು ನಡೆಯುವ ಮತದಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದರು.

ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಮಾತನಾಡಿ, ಎಲ್ಲೆ ಇದ್ದರೂ ಮತದಾನದ ದಿನ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಬೇಕು. ಈ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕೆಂದರು. ಶರಬಯ್ಯಸ್ವಾಮಿ, ವೀರೇಶ ಶಿವನಗುತ್ತಿ, ಸಾವಿತ್ರಿ, ಗಂಗಾಂಬಿಕಾ, ಶ್ರೀಕಾಂತಯ್ಯ ಲಿಂಗಸುಗೂರು, ಯಮನೂರಪ್ಪ ಕುರುಕುಂದ, ರಮೇಶ ಹಲಗಿ ಕುರುಕುಂದ, ಅಮರಗುಂಡಪ್ಪ ಹುಲ್ಲೂರು, ಬಸಮ್ಮ ಹಿರೇಮಠ, ರೇಷ್ಮಾ ಕಂದಕೂರು ಮತದಾನ ಜಾಗೃತಿ ಕುರಿತು ಕವನ ವಾಚನ ಮಾಡಿದರು. ಕಸಾಪ ಸದಸ್ಯರಾದ ಮೌಲಪ್ಪ ಮಾಡಸಿರವಾರ, ರಾಮಣ್ಣ ಹಿರೇಬೇರ‌್ಗಿ, ಸಂಗೀತಾ ಸಾರಂಗಮಠ, ಶಂಕರ ದೇವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net