ಭಾರತ ಚುನಾವಣಾ ಆಯೋಗದ ತಂಡ ಭೇಟಿ

chunavana ayoga
Published on

ಮಡಿಕೇರಿ: ಭಾರತ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ದೀಪ್ ಮಾಲಾ ನೇತೃತ್ವದ ತಂಡವು ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಮತ್ತು ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ತಂಡವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಸಿದರು. ತಂಡದಲ್ಲಿ ದೀಪ್ ಮಾಲಾ(ಅಧೀನ ಕಾರ್ಯದರ್ಶಿ), ಸಹಾಯಕ ವಿಭಾಗಾಧಿಕಾರಿಗಳಾದ ಜ್ಯೋತ್ಸಾನಾ ಮಿಗ್ಲಾನಿ, ಶುಭಮ್ ಮಿಶ್ರಾ(ಎಸ್‌ಒ), ಪ್ರಿನ್ಸ್ ರೈ(ಪಿಎಸ್), ಶ್ರೀ ಜಾವೇದ್ ಖಾನ್(ಎಎಸ್‌ಒ), ಅಂಕುರ್ ಮಲಿಕ್(ಎಎಸ್‌ಒ), ಪ್ರದೀಪ್ ಕೌರ್(ಎಸ್‌ಎಸ್‌ಒ), ಆಯುಷಿ ನಾಯಕ್(ಎಎಸ್‌ಒ) ಮತ್ತು ಮೊಹಮ್ಮದ್ ಅ?ರ್ದ್(ಜೆಎಸ್‌ಎ) ಎಂಬ ೯ ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ. ಅವರು ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು.

ಕಾರುಗುಂದ ಮತ್ತು ಕುಂದಚೇರಿ ಹಾಗೂ ಕೋಪಟ್ಟಿ ಮತಗಟ್ಟೆಗಳಿಗೆ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net